KCSR ಕನ್ನಡ pdf

KCSR ಕನ್ನಡ pdf <<<<click here

14 ಕಾಮೆಂಟ್‌ಗಳು:

  1. ಇಲಾಖೆಯ ಗ್ರೂಪ್-ಡಿ ನೌಕರನಾಗಿದ್ದು ನಾನು ಪದವಿ ಶಿಕ್ಷಣವನ್ನು ಪೂರೈಸಿರುತೇನೆ. ನನಗೆ ಮುಂಬಡ್ತಿ ಸಿಗುವಾಗ ದ್ವಿತೀಯ ದರ್ಜೆ ಸಹಾಯಕನಾಗಿ ಕೊಡುತ್ತಾರೋ ಅಥವಾ ನನ್ನ ಪದವಿ ಶಿಕ್ಷಣ ದ ಮೇಲೆ ಪ್ರಥಮ ದರ್ಜೆ ಸಹಾಯಕನಾಗಿ ಮುಂಬಡ್ತಿ ಕೊಡುತಾರೋ ದಯವಿಟ್ಟು ತಿಳಿಸಿ. ಹಾಗೆಯೇ ಮುಂಬಡ್ತಿ ನಿಯಮದ ಬಗ್ಗೆ ದಯವಿಟ್ಟು ಮಾಹಿತಿ ಕೊಡಿ
    ವಂದನೆಗಳು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ವೃಂದ ಮತ್ತು ನೇಮಕಾತಿ ನಿಯಮಗಳನುಸಾರ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ

      ಅಳಿಸಿ
  2. ಇಲಾಖೆಯ ಗ್ರೂಪ್-ಡಿ ನೌಕರನಾಗಿದ್ದು ನಾನು ಪದವಿ ಶಿಕ್ಷಣವನ್ನು ಇಲಾಖೆಯ ಅನುಮತಿ ಮೇರೆಗೆ ಪೂರೈಸಿರುತೇನೆ. ನನಗೆ ಮುಂಬಡ್ತಿ ಸಿಗುವಾಗ ದ್ವಿತೀಯ ದರ್ಜೆ ಸಹಾಯಕನಾಗಿ ಕೊಡುತ್ತಾರೋ ಅಥವಾ ನನ್ನ ಪದವಿ ಶಿಕ್ಷಣ ದ ಮೇಲೆ ಪ್ರಥಮ ದರ್ಜೆ ಸಹಾಯಕನಾಗಿ ಮುಂಬಡ್ತಿ ಕೊಡುತಾರೋ ದಯವಿಟ್ಟು ತಿಳಿಸಿ. ಹಾಗೆಯೇ ಮುಂಬಡ್ತಿ ನಿಯಮದ ಬಗ್ಗೆ ದಯವಿಟ್ಟು ಮಾಹಿತಿ ಕೊಡಿ
    ವಂದನೆಗಳು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ದ್ವಿತೀಯ ದರ್ಜೆ ಸಹಾಯಕರಾಗಿ ಮುಂಬಡ್ತಿ ನೀಡಲಾಗುತ್ತದೆ

      ಅಳಿಸಿ
  3. ಸಿ ವೃಂದದ ನೌಕರರಿಗೆ ಲಾಖಾ ಮುಂಬಡ್ತಿ ನೀಡುವಾಗ ಕನಿಷ್ಟ ೫ ವರ್ಷಗಳ ಸೇವೆಯನ್ನು ಪ್ರಸ್ತುತ ಕಾರ್ಯ ನಿರ್ವಸುತ್ತಿರುವ ಹುದ್ದೆಯಲ್ಲಿ ನಿರ್ವಹಿಸಬೇಕೆಂಬ ನಿಯಮ ಕಡ್ಡಾಯವಾಗಿರುತ್ತದೆ. ನಾನು ಅಧೀಕ್ಷಕರಾಗಿ ಕಳೆದ ೩ ವರ್ಷಗಳಿಂದ ಕಾರ್ಯನಿರ್ವಸುತ್ತಿರುತ್ತೇನೆ. ಪ್ರಸ್ತುತ ಸಹಾಯಕ ನಿರ್ದೆಶಕರ ಹುದ್ದೆಗೆ ಮುಂಬಡ್ತಿ ನೀಡಲು ಇಲಾಖೆಯು ನಿರಾಕರಿಸುತ್ತಿದ್ದು ಜೇಷ್ಠತಾ ಪಟ್ಟಿಯಲ್ಲಿ ನನಗಿಂತ ಕೆಳಗಿರುವವರಿಗೆ ಒಟ್ವಾರೆ ಸೇವಾ ಹಿರಿತನವನ್ನು ಆಧರಿಸಿ ಮುಂಬಡ್ತಿ ನೀಡಲು ಮುಂದಾಗಿದೆ ಆದರೆ ಪ್ರಸ್ತುತ ಹುದ್ದೆಯಲ್ಲಿ ಅವರೂ ಸಹ ೩ವರ್ಷಗಳ ಸೇವೆಯನ್ನು ಮಾತ್ರ ಮಾಡಿರುತ್ತಾರೆ ಆದರೂ ಅವರನ್ನು ಮುಂಬಡ್ತಿಗೆ ಪರಿಗಣಿಸುವುದು ಸರಿಯೇ ಹಾಗೂ ೩ ವರ್ಷಗಳ ಸೇವೆ ಸಲ್ಲಿಸಿ ಮುಂದಿನ ಮುಂಬಡ್ತಿಗೆ ಯಾರೂ ಅರ್ಹತಾ ಸೇವಾವಧಿಯನ್ಬು ಪೂರೈಸಿರದಿದ್ದ ಪಕ್ಷದಲ್ಲಿ ಜೇಷ್ಠತಾ ಪಟ್ಟಿಯಲ್ಲಿ ಮೇಲಿರುವ ನೌಕರರಿಗೆ ನಿಯಮ ೩೨ ರಡಿ ಮುಂಬಡ್ತಿ ನೀಡಬಹುದೇ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಕೋರುತ್ತೇನೆ

    ಪ್ರತ್ಯುತ್ತರಅಳಿಸಿ
  4. ಪ್ರಸ್ತುತ ನಾನು ಒಂದೇ ಹುದ್ದೆಯಲ್ಲಿ 12 ವರ್ಷಗಳು ಸೂಪರ್ ವೈಸರ್ ಆಗಿ ಕಾರ್ಯ ನಿರ್ವಹಿಸುತ್ತ ಇದ್ದೇನೆ. ನನಗೆ 5ವರ್ಷಗಳ ನಂತರ D ಗ್ರೂಪ್ನಲ್ಲಿ ಸ್ಕೆಲ್ ಮಾಡಿರುತ್ತಾರೆ.ಸ್ಕೆಲ್ ಆಗಿ 7 ವರ್ಷಗಳು ಕಳೆದಿವೆ. ಈ ವೇಳೆ ಡಿಗ್ರಿ ಸರ್ಟಿಫಿಕೇಟ್ ಆದರದ ಮೇಲೆ ಯಾವ ಗ್ರೂಪ್ನಲ್ಲಿ ಮುಂಬಡ್ತಿ ಪಡೆಯಲು ನಾನು ಅರ್ಹ ನಾಗಿರುತ್ತೇನೆ. ತಿಳಿಸಿ.

    ಪ್ರತ್ಯುತ್ತರಅಳಿಸಿ
  5. ಅನುದಾನಿತ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು 9 ಮತ್ತು 10 ನೇ ತರಗತಿಗಳಿಗೆ ಪ್ರಥಮ ಭಾಷೆ ಕನ್ನಡವನ್ನು ಬೋಧಿಸುತ್ತಿರುತ್ತಾರೆ. ಸದರಿಯವರಿಗೆ ವಾರಕ್ಕೆ 12 ಅವಧಿಗಳು ಇರುತ್ತವೆ. ಹೀಗಿರುವಾಗ ಸದರಿಯವರು ವೈಯಕ್ತಿಕ ಕಾರಣಗಳನ್ನು ನೀಡಿ ಸತತವಾಗಿ 15 ಅರ್ಧ ವೇತನ ಗಳಿಕೆ ರಜೆ ಹಾಗೂ 37 ಗಳಿಕೆ ರಜೆಯನ್ನು ಹಾಕಿರುತ್ತಾರೆ. ಇದು ನಿಯಮಬಾಹಿರವೇ? ಹಾಗಿದ್ದಲ್ಲಿ ಅನುದಾನಿತ ಪ್ಕೌಢ ಶಾಲಾ ಮುಖ್ಯೋಪಾಧ್ಯರಿಗೆ ಹಾಗೂ ಸಹ ಶಿಕ್ಷರಿಗಿರುವ ರಜೆಗಳು ಎಷ್ಟು ಮತ್ಚು ಅವುಗಳ ನಿಯಮಗಳನ್ನು ತಿಳಿಸಿಕೊಡಿ.

    ಪ್ರತ್ಯುತ್ತರಅಳಿಸಿ
  6. ನಾನು ಹದಿನೈದು ವರ್ಷ ಸೇವೆ ಸಲ್ಲಿಸಿ ಈಗ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (6-8 )ರಾಗಿ ಆಯ್ಕೆ ಆಗಿದ್ದೇನೆ. ಈಗ ನನಗೆ ಒಂದು ಬಡ್ತಿ ಸಿಗುತ್ತದೆಯೋ? ಇಲ್ಲವೋ? ತಿಳಿಸಿರಿ. ಈಗಿನ ವೇತನ ಶ್ರೇಣಿ 30350+ ಇದೆ. ಮೂಲವೇತನ 37900 ಇದೆ

    ಪ್ರತ್ಯುತ್ತರಅಳಿಸಿ
  7. ಮದುವೆ ನಂತರ ತಾಯಿ ಅನ್ನು ನಾಮಿನಿ ಮಾಡಬಹುದೇ?

    ಪ್ರತ್ಯುತ್ತರಅಳಿಸಿ
  8. ಸರ್‌ ನೌಕಕರ ವಿರುದ್ಧ ವಿಚಾರಣೆ ಬಾಕಿ ಇದ್ದರೆ ವಾರ್ಷಿಕ ವೇತನ ಬಡ್ತಿಗಳನ್ನು ಮಂಜೂರು ಮಾಡಬಹುದೇ

    ಪ್ರತ್ಯುತ್ತರಅಳಿಸಿ
  9. ಸರ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಾನು ಪ್ರಭಾರಿ Headmaster ಆಗಿ ಚಾರ್ಜ್ ತೆಗೆದು ಕೊಂಡಿದ್ದು , incharge ಇದ್ದವರು attestation ಮಾಡಲು ಬರುವುದಿಲ್ಲ ಎಂದು ಕೆಲವರು ಹೇಳಿದ್ದು ಕೇಳಿದ್ದೇನೆ. ಹೌದಾ

    ಪ್ರತ್ಯುತ್ತರಅಳಿಸಿ
  10. .ಸಿ.ಎಸ್.ಆರ್ 1977 ರ ನಿಯಮದನ್ವಯ ಸೇವಾ ಭದ್ರತೆಗಾಗಿ ನಿಯಮ 252(ಬಿ) ಹಾಗೂ ವೇತನ ಭದ್ರತೆಗಾಗಿ ನಿಯಮ 42(ಬಿ)

    ಪ್ರತ್ಯುತ್ತರಅಳಿಸಿ
  11. ವಿಷಯ: ಖಾಯಂ ಪೂರ್ವ ಸೇವಾ ಅವಧಿಯ ಬಗ್ಗೆ.

    ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನಾನು ದಿನಾಂಕ: 01-01-2019 ರಂದು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಾತಿ ಹೊಂದಿ ಕಾರ್ಯನಿರ್ವಹಿಸಿರುತ್ತೇನೆ ಹಾಗೂ ದಿನಾಂಕ:01/04/2021 ರಂದು ಸಕ್ಷಮ ಪ್ರಾಧಿಕಾರವು ಖಾಯಂ ಪೂರ್ವ ಸೇವಾ ಅವಧಿ ತೃಪ್ತಿಕರವನ್ನು ಘೋಷಣೆ ಮಾಡಿರುತ್ತದೆ. 22 23 ರಲ್ಲಿ ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಇಲಾಖೆಯಿಂದ ಅನುಮತಿ ಪಡೆದು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಮರು ನೇಮಕಾತಿ ಹೊಂದಿ ಪ್ರಸ್ತುತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಎರಡು ಹುದ್ದೆಗಳು ಒಂದೇ ಆಗಿದ್ದು ಮತ್ತೆ ಕಾಯಂ ಸೇವಾ ಪೂರ್ಣ ಅವಧಿಯ ಘೋಷಣೆ ಮಾಡುವ ಅವಶ್ಯಕತೆ ಇದೆಯೇ? ಇದೆ ಎಂದಾದಲ್ಲಿ ದಯವಿಟ್ಟು ನಿಯಮವನ್ನು ತಿಳಿಸಿ ಕೊಡಿ.
    ಕಾಯo ಪೂರ್ವ ಸೇವಾ ಅವಧಿಯ ಘೋಷಣೆ ಅವಶ್ಯಕತೆ ಇಲ್ಲವೆಂದಾದಲ್ಲಿ , ಸಂಬಂಧಿಸಿದ ನಿಯಮವನ್ನು ದಯವಿಟ್ಟು ತಿಳಿಸಿಕೊಡಬೇಕಾಗಿ ತಮ್ಮಲ್ಲಿ ವಿನಯಪೂರಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.

    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ