ನೌಕರರ ಪ್ರಶ್ನೆಗಳಿಗೆ ಉತ್ತರ




ಸ್ನೇಹಿತರೆ ಈ ಪುಟದಲ್ಲಿ ನೀಡಲಾಗಿರುವ ಮಾಹಿತಿ ವಿಜಯವಾಣಿ ಪತ್ರಿಕೆಯ ಸರ್ಕಾರಿ ಕಾರ್ನರ್

ಸರ್ಕಾರಿ ಕಾರ್ನರ್<<<<<< click here


ವಿಭಾಗದಿಂದ ಆಯ್ದ ಮಾಹಿತಿಯಾಗಿರುತ್ತದೆ. ವಿಜಯವಾಣಿ ಪತ್ರಿಕೆಗೆ ಧನ್ಯವಾದಗಳು.

ರಜೆ, ಭತ್ಯೆ, ವೇತನ ತಾರತಮ್ಯ, ದೈಹಿಕ, ಮಾನಸಿಕ ಕಿರುಕುಳ ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಕಾನೂನು ಪರಿಹಾರ ಸೂಚಿಸುವ ದೈನಂದಿನ ಅಂಕಣ ಸರ್ಕಾರಿ ಕಾರ್ನರ್. ಸೇವಾ ಕಾನೂನು ತಜ್ಞ ಲ. ರಾಘವೇಂದ್ರ ಅವರು ಸರ್ಕಾರಿ ಉದ್ಯೋಗಸ್ಥರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ.

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.

ಇ-ಮೇಲ್: sarakaricarner@gmail.com

ದೂರವಾಣಿ: 8884432666, ಫ್ಯಾಕ್ಸ್: 080-26257464.











***


ದಿನದ ಪ್ರಶ್ನೆ
ನಾನು ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ಅನಾರೋಗ್ಯದ ಕಾರಣದಿಂದಾಗಿ ಈ ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ನನ್ನ ಬದಲಾಗಿ ನನ್ನ ಮಗನು ಆ ಸ್ಥಾನಕ್ಕೆ ಕಾರ್ಯ ನಿರ್ವಹಿಸಲು ಮಾಡಬೇಕಾದ ಕ್ರಮಗಳನ್ನು ಕುರಿತು ಮಾಹಿತಿ ನೀಡಿ.
| ಚ.ಆ. ಮಠ ವಿಜಯಪುರ
ನೀವು ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೀರಷ್ಟೆ. ಒಂದುವೇಳೆ ಅನಾರೋಗ್ಯದ ಕಾರಣದಿಂದ ನೀವು ನಿವೃತ್ತಿ ಪಡೆದಿರಿ ಎಂದಾದರೂ ಅನುಕಂಪದ ಮೇರೆಗೆ ನಿಮ್ಮ ಮಗನು ನೇಮಕವಾಗಲು ಕರ್ನಾಟಕ ಸರ್ಕಾರಿ ನಿಯಮಾವಳಿಯ ರೀತ್ಯ ಅವಕಾಶವಿಲ್ಲ. ಆದರೆ ಅವನು ಸೂಕ್ತವಾದ ವಿದ್ಯಾರ್ಹತೆಯನ್ನು ಪಡೆದಿದ್ದರೆ ಆಡಳಿತ ಮಂಡಳಿಯು ಖಾಲಿಯಾದ ಹುದ್ದೆಗೆ ನೇರವಾಗಿಯೇ ನೇವಿಮಕ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಶಿಕ್ಷಣ ಕೈಪಿಡಿ’ ಪುಸ್ತಕವನ್ನು ನೋಡಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464



23-8-16
ನೇಮಕಾತಿ ದಿನಾಂಕದಿಂದ 2 ವರ್ಷ ಪ್ರೊಬೇಷನರಿ ಅವಧಿಯೇ?
ನಾನು ಸಹ್ಯಾದ್ರಿ ಕನ್ನಡ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ. 1998ರಿಂದ ನೇಮಕಾತಿ ಹೊಂದಿದ್ದೇನೆ. ಆದರೆ ಈ ಶಾಲೆಯು 2014ರ ಫೆಬ್ರವರಿಯಲ್ಲಿ ಅನುದಾನಕ್ಕೊಳಪಟ್ಟಿದೆ. ನನ್ನ ಹುದ್ದೆಯು ಸಹ ಅನುದಾನಕ್ಕೊಳಪಟ್ಟಿದ್ದು, ಈಗ ಪ್ರೊಬೇಷನರಿ ಅವಧಿ ಬಗ್ಗೆ ಗೊಂದಲಗಳಿವೆ. ನೇಮಕಾತಿ ದಿನಾಂಕದಿಂದ 2 ವರ್ಷ ಪ್ರೊಬೇಷನರಿಅವಧಿಯೇ? ಅಥವಾ ಅನುದಾನಕ್ಕೊಳಪಟ್ಟ ದಿನಾಂಕದಿಂದ 2 ವರ್ಷಗಳೋ ಎಂಬ ಗೊಂದಲಗಳಿವೆ. ಸೂಕ್ತ ಪರಿಹಾರ ಸೂಚಿಸಿ.| ಬಿ. ಸುಧೀಂದ್ರ ಕುಮಾರ್, ಭದ್ರಾವತಿಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ (ನೌಕರರ ಸೇವಾ ಷರತ್ತುಗಳು) ನಿಯಮಾವಳಿ 1999ರ ಮೇರೆಗೆ ಅನುದಾನಿತ ಶಾಲೆಯಲ್ಲಿ ನೇಮಕ ಹೊಂದಿದ ನೌಕರರ ಸೇವಾ ಅವಧಿ ಅನುದಾನಿತ ದಿನಾಂಕದಿಂದ ಪ್ರಾರಂಭವಾಗುತ್ತದೆ. ಆದ ಕಾರಣ ನಿಮ್ಮ ಪ್ರೊಬೇಷನರಿ ಅವಧಿ 2014ರ ಫೆಬ್ರವರಿಯಿಂದ ಆರಂಭವಾಗಿ 2 ವರ್ಷಗಳಿರುತ್ತವೆ. ಅನುದಾನವನ್ನು ಸರ್ಕಾರವು ನೀಡುತ್ತಿದ್ದು, ಮೇಲಿನ ನಿಯಮಾವಳಿಯಂತೆ ಪರೀಕ್ಷಾರ್ಥ ಅವಧಿಯನ್ನು 2 ವರ್ಷಗಳ ಕಾಲ ನಿಗದಿಪಡಿಸಲಾಗುತ್ತದೆ.
24-8-16.
ನಾನು 2010ರಲ್ಲಿ ಮುಖ್ಯೋಪಾಧ್ಯಾಯ ಹುದ್ದೆಯಪದೋನ್ನತಿ ಬೇಡವೆಂದು, ನನ್ನ ಅಂಗವೈಕಲ್ಯ ಕಾರಣದಿಂದಾಗಿ ಸ್ವ ಇಚ್ಚೆಯಿಂದ ನಿರಾಕರಿಸಿದ್ದೆ. 20, 25 ವರ್ಷ ಮತ್ತು 30 ವರ್ಷದ ವೇತನ ಬಡ್ತಿಗೆ ಅರ್ಹನಾಗಿದ್ದೇನೆಯೇ?| ಪಿ.ಎಚ್.ಪಾಟೀಲ್, ಬೆಳಗಾವಿದಿನಾಂಕ 9.5.2002ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 13, ಎಸ್​ಆರ್​ಪಿ 2002, ಹಾಗೂ ದಿನಾಂಕ 14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012ರಂತೆ ಈಗಾಗಲೇ ಸ್ವ ಇಚ್ಛೆಯಿಂದ ತಮ್ಮ ಪದೋನ್ನತಿ ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ 20, 25, ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಗಳನ್ನು ನೀಡಬಾರದೆಂದು ಸೂಚಿಸಿದೆ. ಆದ್ದರಿಂದ ನೀವು ಈ ಹೆಚ್ಚುವರಿ ವೇತನ ಬಡ್ತಿಗಳಿಗೆ ಅರ್ಹರಲ್ಲ.
***

25-8-16.
ನೆನಾನು ಇಲಾಖೆಯ ಪೂರ್ವಾನುಮತಿ ಪಡೆದು (ಎನ್​ಓಸಿ) ಕೇಂದ್ರೀಯ ದಾಖಲಾತಿ ಘಟಕವು ನಡೆಸಿದ ಪರೀಕ್ಷೆಯಲ್ಲಿ ಪದವಿಪೂರ್ವ ಕಾಲೇಜಿಗೆ ನೇರ ನೇಮಕಾತಿ ಹೊಂದಿದ್ದೇನೆ. ನಾನು ಈ ಹಿಂದೆ ಜನವರಿ 2012ರಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ನೇಮಕಗೊಂಡಿದ್ದು, ನಿವೃತ್ತಿ ವೇತನದ ಹುದ್ದೆಯನ್ನು ಧಾರಣೆ ಮಾಡಿದ್ದೆ. ನಾನೀಗ ಪದವಿಪೂರ್ವ ಕಾಲೇಜಿನಲ್ಲಿ 3 ವರ್ಷ ಸೇವೆ ಸಲ್ಲಿಸಿದ್ದು, 2 ವೇತನ ಬಡ್ತಿಗಳನ್ನು ಪಡೆದಿದ್ದು, 3ನೇ ವೇತನ ಬಡ್ತಿ ಪಡೆಯಲು ಪುನಃ ತರಬೇತಿ ಅವಧಿ ಪೂರ್ಣಗೊಳಿಸಬೇಕೇ? ನನಗೆ ಮೊದಲಿನ ನಿವೃತ್ತಿ ವೇತನ ಸೌಲಭ್ಯ ಈ ಇಲಾಖೆಯಲ್ಲೂ ಮುಂದುವರಿಯುವುದೇ?| ವನಿತಾ ರಾಯೇಶ್ವರ್ ಶೆಟ್ಟಿ, ಶಿರಸಿಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಹುದ್ದೆಗೆ ನೇಮಕ ಮಾಡುವಾಗ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ 4 ವರ್ಷಗಳ ಕಾಲ ಪರೀಕ್ಷಾರ್ಥ ಅವಧಿ ನಿಗದಿಪಡಿಸಲಾಗಿರುತ್ತದೆ. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51ರಂತೆ ಮೊದಲ 3 ವೇತನ ಬಡ್ತಿಗಳನ್ನು ಯಾವುದೇ ಅಡೆತಡೆ ಇಲ್ಲದೆ ಮಂಜೂರು ಮಾಡಬಹುದು. ಆದರೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಪ್ರಸ್ತುತ ಬಿ.ಎಡ್ ಶಿಕ್ಷಣ ತರಬೇತಿ ಕಡ್ಡಾಯಗೊಳಿಸಿರುವುದರಿಂದ, ಮತ್ತೆಬಿಎಡ್ ತರಬೇತಿಯನ್ನು ಪ್ರೌಢಶಾಲಾ ಶಿಕ್ಷಕರಾಗಿ ನೇಮಕವಾಗುವ ಮೊದಲೇ ಪಡೆದಿರುವುದರಿಂದ, ಮತ್ತೆ ತರಬೇತಿ ಪಡೆಯಬೇಕಾದ ಅವಶ್ಯಕತೆ ಇಲ್ಲ. ಆದರೆ ನಿಮ್ಮ 4ನೇ ವೇತನ ಬಡ್ತಿಯನ್ನು ಪ್ರೊಬೇಷನರಿ ಅವಧಿ ನಂತರ ಮಂಜೂರು ಮಾಡಲಾಗುತ್ತದೆ. ನೀವು ಇಲಾಖೆಯ ಪೂರ್ವಾನುಮತಿ ಪಡೆದು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252 (ಬಿ)ರಂತೆ ಕಾರ್ಯ ವಿಮುಕ್ತಿ ಹೊಂದಿ ಪದವಿಪೂರ್ವ ಕಾಲೇಜಿಗೆ ನೇಮಕವಾಗಿರುವುದರಿಂದ ನಿಮಗೆ ಸರ್ಕಾರಿ ಸೇವಾ ನಿಯಮಾವಳಿಯ 224ಬಿರಂತೆ ಪಿಂಚಣಿಗಾಗಿ ಹಿಂದಿನ ಸೇವೆ ಪರಿಗಣಿಸಲು ನಿಮ್ಮ ನೇಮಕಾತಿಪ್ರಾಧಿಕಾರಕ್ಕೆ ನೀವು ಮನವಿ ಸಲ್ಲಿಸಬೇಕು. ನಿಮ್ಮ ಮನವಿಯ ಆಧಾರದ ಮೇಲೆ ನೇಮಕಾತಿ ಪ್ರಾಧಿಕಾರಿಯವರು ನೀವು ಪ್ರೌಢಶಾಲೆಯಲ್ಲಿ 12.1.2006ರಿಂದ ಸೇವೆ ಸಲ್ಲಿಸಿರುವುದರಿಂದ ನಿಮ್ಮ ಹುದ್ದೆಯನ್ನು ಪಿಂಚಣಿಯುಕ್ತ ಹುದ್ದೆಯೆಂದು ಪರಿಗಣಿಸಿ ಮಂಜೂರು ಮಾಡಲಾಗುತ್ತದೆ.
***
ನಾನು ಇತ್ತೀಚೆಗಷ್ಟೇ ಸರ್ಕಾರಿ ಸೇವೆಗೆ ಸೇರಿದ್ದು ನನ್ನ ನೇಮಕಾತಿ ಆದೇಶದಲ್ಲಿ ಅಕೌಂಟ್ಸ್ ಹೈಯರ್, ರೆವಿನ್ಯೂ ಹೈಯರ್ ಮತ್ತು ಜನರಲ್ ಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕೆಂದು ಸೂಚಿಸಲಾಗಿದೆ. ನಾನು ಈ ಪರೀಕ್ಷೆಗಳನ್ನು ಪರೀಕ್ಷಾರ್ಥ ಅವಧಿಯೊಳಗೆ ಪೂರೈಸಬೇಕಾಗಿದ್ದು ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಈ ಪರೀಕ್ಷೆಗಳಿಗೆ ಹಾಜರಾಗಿದ್ದೇನೆ. ಈ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಹೇಗೆ? ಯಾವ್ಯಾವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು? ದಯವಿಟ್ಟು ವಿವರ ನೀಡಿ.

|ಸುಮಿತ್ರಾ ಬಿ.ಎನ್. ದಾವಣಗೆರೆ

ಕರ್ನಾಟಕ ಸರ್ಕಾರಿ ಸೇವಾ (ಕನ್ನಡಭಾಷೆ ಮತ್ತು ಸೇವಾ ಪರೀಕ್ಷೆ) ನಿಯಮಗಳು 1974ರ ರೀತ್ಯ ಪ್ರತಿಯೊಬ್ಬ ಸರ್ಕಾರಿ ನೌಕರನು ಪರೀಕ್ಷಾರ್ಥ ಅವಧಿಯೊಳಗೆ ತನಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕಾದುದು ಕಡ್ಡಾಯ. ಈ ನಿಯಮಾವಳಿಯಲ್ಲಿ ಪರೀಕ್ಷೆಗೆ ನಿಗದಿಪಡಿಸಿದ ಪಠ್ಯಕ್ರಮ, ವಿಧಾನ ಇತ್ಯಾದಿ ವಿವರಗಳನ್ನು ನೀಡಲಾಗಿದೆ. ನೀವು ಹಾಜರಾಗುತ್ತಿರುವ ಇಲಾಖಾ ಪರೀಕ್ಷೆಗಳನ್ನು ಆಯೋಗವು ವಸ್ತುನಿಷ್ಠ ಮಾದರಿಯಲ್ಲಿ ನಡೆಸುತ್ತಿರುವುದರಿಂದ ಒಮ್ಮೆ ನೀವು ಈ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಅವುಗಳ ವಿಷಯಸೂಚಿಕೆ ಮತ್ತು ಪರಿವಿಡಿಯನ್ನು ಅಧ್ಯಯನ ಮಾಡುವುದರೊಂದಿಗೆ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಸಹ ಅವಲೋಕಿಸಬೇಕು. ಈ ಪರೀಕ್ಷೆಗಳಿಗೆ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಉತ್ತರಿಸಲು ಅವಕಾಶವಿರುವುದರಿಂದ ಇತ್ತೀಚಿನವರೆಗಿನ ತಿದ್ದುಪಡಿಗಳನ್ನು ಅಳವಡಿಸಿದ ಪುಸ್ತಕಗಳನ್ನೇ ನೀವು ಅಧ್ಯಯನ ಮಾಡಬೇಕಾಗುತ್ತದೆ. ಬೆಂಗಳೂರಿನ ಶ್ರೀ ರಾಘವೇಂದ್ರ ಪ್ರಕಾಶನದವರು ಅಕೌಂಟ್ಸ್ ಹೈಯರ್ ವಿಷಯಗಳಿಗೆ ಸಂಬಂಧಿಸಿದ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು, ಆರ್ಥಿಕ ಸಂಹಿತೆ, ಖಜಾನೆ ಸಂಹಿತೆ, ಬಜೆಟ್ ಕೈಪಿಡಿ, ರೆವಿನ್ಯೂ ಹೈಯರ್ (ಭಾಗ 1 ಮತ್ತು 2 ಕ್ಕೆ) ಸಂಬಂಧಿಸಿದಂತೆ ರೆವಿನ್ಯೂ ಹೈಯರ್ ಪಠ್ಯ ಪುಸ್ತಕಗಳನ್ನು ಹಾಗೂ ಜನರಲ್ ಲಾ ಭಾಗ 1, 2ಕ್ಕೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳನ್ನು ಖರೀದಿಸಿ ಅಧ್ಯಯನ ಮಾಡಬಹುದು. (ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ನೋಡಬಹುದು, ಪುಸ್ತಕಕ್ಕೆ ಮೊಬೈಲ್ ಸಂಖ್ಯೆ 94812 44434ನ್ನು ಸಂರ್ಪಸಬಹುದು.


ನನ್ನ ಪತ್ನಿ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕಿ. ನಮಗೆ ಮೊದಲನೇ ಮಗುವಾಗಿದ್ದಾಗ ಅವಳು 180 ದಿನಗಳ ಪ್ರಸೂತಿ ರಜೆ ತೆಗೆದುಕೊಂಡಿದ್ದಾಳೆ. ಈಗ ನಮಗೆ 2ನೇ ಮಗು ಜನಿಸಿದ್ದು ಮತ್ತೆ ನನ್ನ ಪತ್ನಿ ಮಾತೃತ್ವ ರಜೆಯಲ್ಲಿ ಇದ್ದಾಳೆ. ಆದರೆ ದುರದೃಷ್ಟವಶಾತ್ ನಮಗೆ 2ನೇ ಮಗು 45 ದಿನಗಳವರೆಗೆ ಬದುಕಿ ಮರಣಿಸಿದೆ. ಈಗ ನನ್ನ ಪತ್ನಿ ಸೇವೆಗೆ ಹಾಜರಾಗಬೇಕೆ? ಅಥವಾ 180 ದಿನಗಳು ಮುಗಿದ ಮೇಲೆ ಸೇವೆಗೆ ಹಾಜರಾಗಬೇಕೆ? ಹೀಗೆ ಪ್ರಸೂತಿ ರಜೆ ತೆಗೆದುಕೊಂಡು ಮತ್ತೊಮ್ಮೆ ಈ ರಜೆ ನನ್ನ ಪತ್ನಿಗೆ ದೊರಕುತ್ತದೆಯೇ?

| ಮಾ.ವಿ. ರಾಜಶೇಖರ, ಬೀದರ್

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಂತೆ ನಿಮ್ಮ ಪತ್ನಿ 2ನೇ ಬಾರಿ ಮಾತೃತ್ವ ರಜೆ ಪಡೆದಿರುವುದು ಕ್ರಮಬದ್ಧ. ಆದರೆ ಮಗು ಅಕಾಲಿಕ ಮರಣ ಹೊಂದಿದ್ದು, ತಾಯಿಯ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಬಲಗೊಳ್ಳಲು ಪ್ರಸ್ತುತ ಮಂಜೂರಾಗಿರುವ 180 ದಿನಗಳ ಪ್ರಸೂತಿ ರಜೆ ಬಳಸಿಕೊಳ್ಳಬಹುದು. ಆದುದರಿಂದ ಮತ್ತೆ ನಿಮ್ಮ ಪತ್ನಿ ಕರ್ತವ್ಯಕ್ಕೆ ಹಾಜರಾಗದೆ 180 ದಿನಗಳ ನಂತರ ಕೆಲಸಕ್ಕೆ ಹೋಗಬಹುದು. ಈ ನಿಯಮಾವಳಿ ರೀತ್ಯ 2 ಜೀವಂತ ಮಗುವಿರುವವರೆಗೂ ಹೆರಿಗೆ ರಜೆ ಪಡೆಯಬಹುದು.


ನಾನು ಸಹ್ಯಾದ್ರಿ ಕನ್ನಡ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ. 1998ರಿಂದ ನೇಮಕಾತಿ ಹೊಂದಿದ್ದೇನೆ. ಆದರೆ ಈ ಶಾಲೆಯು 2014ರ ಫೆಬ್ರವರಿಯಲ್ಲಿ ಅನುದಾನಕ್ಕೊಳಪಟ್ಟಿದೆ. ನನ್ನ ಹುದ್ದೆಯು ಸಹ ಅನುದಾನಕ್ಕೊಳಪಟ್ಟಿದ್ದು, ಈಗ ಪ್ರೊಬೇಷನರಿ ಅವಧಿ ಬಗ್ಗೆ ಗೊಂದಲಗಳಿವೆ. ನೇಮಕಾತಿ ದಿನಾಂಕದಿಂದ 2 ವರ್ಷ ಪ್ರೊಬೇಷನರಿ ಅವಧಿಯೇ? ಅಥವಾ ಅನುದಾನಕ್ಕೊಳಪಟ್ಟ ದಿನಾಂಕದಿಂದ 2 ವರ್ಷಗಳೋ ಎಂಬ ಗೊಂದಲಗಳಿವೆ. ಸೂಕ್ತ ಪರಿಹಾರ ಸೂಚಿಸಿ.

| ಬಿ. ಸುಧೀಂದ್ರ ಕುಮಾರ್, ಭದ್ರಾವತಿ

ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ (ನೌಕರರ ಸೇವಾ ಷರತ್ತುಗಳು) ನಿಯಮಾವಳಿ 1999ರ ಮೇರೆಗೆ ಅನುದಾನಿತ ಶಾಲೆಯಲ್ಲಿ ನೇಮಕ ಹೊಂದಿದ ನೌಕರರ ಸೇವಾ ಅವಧಿ ಅನುದಾನಿತ ದಿನಾಂಕದಿಂದ ಪ್ರಾರಂಭವಾಗುತ್ತದೆ. ಆದ ಕಾರಣ ನಿಮ್ಮ ಪ್ರೊಬೇಷನರಿ ಅವಧಿ 2014ರ ಫೆಬ್ರವರಿಯಿಂದ ಆರಂಭವಾಗಿ 2 ವರ್ಷಗಳಿರುತ್ತವೆ. ಅನುದಾನವನ್ನು ಸರ್ಕಾರವು ನೀಡುತ್ತಿದ್ದು, ಮೇಲಿನ ನಿಯಮಾವಳಿಯಂತೆ ಪರೀಕ್ಷಾರ್ಥ ಅವಧಿಯನ್ನು 2 ವರ್ಷಗಳ ಕಾಲ ನಿಗದಿಪಡಿಸಲಾಗುತ್ತದೆ. (ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರರ ಕರ್ನಾಟಕ ಶಿಕ್ಷಣ ಕೈಪಿಡಿ ಪುಸ್ತಕ ನೋಡಿ. ಪುಸ್ತಕಕ್ಕೆ 9481244434ನ್ನು ಸಂರ್ಪಸಿ)


18/8/2016
ನಾನು ವಕ್ಪ್ ಮಂಡಳಿಯಲ್ಲಿ ಅಂಗವಿಕಲರ ಮೀಸಲಾತಿ ಅಡಿಯಲ್ಲಿ ದ್ವಿತೀಯದರ್ಜೆ ಸಹಾಯಕನಾಗಿ ನೇಮಕಾತಿ ಹೊಂದಿದ್ದೇನೆ. ಸರ್ಕಾರಿ ಸೇವಾ ನಿಯಮಾವಳಿ ಪ್ರಕಾರ ನಾನು ವೇತನ ಭತ್ಯೆ ಪಡೆಯುತ್ತಿದ್ದೇನೆ. ಆದರೆ ನಾನು ಅಂಗವೈಕಲ್ಯದ ಬಗ್ಗೆ ಯಾವುದೇ ವಿಶೇಷ ಭತ್ಯೆ ಪಡೆಯುತ್ತಿಲ್ಲ ಇದಕ್ಕೆ ನಾನು ಅರ್ಹನೇ?

ಐಅಬ್ದುಲ್ ಖಾದಿರ್ ಹಾನಗಲ್

ದಿನಾಂಕ 13.2.2013ರಿಂದ ಅಂಗವಿಕಲ ಸರ್ಕಾರಿ ನೌಕರನಿಗೆ ಅವನ ಮೂಲ ವೇತನಕ್ಕೆ ಅನುಗುಣವಾಗಿ ಶೇ. 6ರಷ್ಟು ವಿಶೇಷ ಭತ್ಯೆ ನೀಡಲಾಗುವುದು. ಅಲ್ಲದೆ ಅವನು ಅಂಧ ಮತ್ತು ಸಂಪೂರ್ಣವಾಗಿ ಅಂಗವಿಕಲನಾಗಿದ್ದರೆ ಮಾಸಿಕವಾಗಿ ರೂ. 500-00 ವಿಶೇಷ ಭತ್ಯೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೀವು ನಿಮ್ಮ ನೇಮಕಾತಿ ಅಧಿಕಾರಿಯವರಿಗೆ ನಿಮ್ಮ ಅಂಗವೈಕಲ್ಯದ ಸ್ವರೂಪದ ಆಧಾರದ ಮೇಲೆ ವಿಶೇಷ ಭತ್ಯೆ ಮಂಜೂರು ಮಾಡಲು ಕೋರಬಹುದು. (ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ ಆರ್ಥಿಕ ಸೌಲಭ್ಯಗಳ ಕೈಪಿಡಿ ಪುಸ್ತಕವನ್ನು ನೋಡಬಹುದಾಗಿದ್ದು, ಪುಸ್ತಕಕ್ಕೆ ಮೊಬೈಲ್ ಸಂಖ್ಯೆ 94812 44434ನ್ನು ಸಂರ್ಪಸಬಹುದು)



ನಾನು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದು 5 ವರ್ಷ ಪೂರ್ಣಗೊಂಡಿದೆ. ನಾನು ಉನ್ನತ ವ್ಯಾಸಂಗ ಮಾಡಲು ಬಯಸಿದ್ದು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಸಂಬಳ ಸಹಿತ ಉನ್ನತ ವ್ಯಾಸಂಗ ಮಾಡಲು ಅವಕಾಶವಿದೆಯೇ? ಇದ್ದರೆ ಮುಂದೆ ನಾನು ಯಾವ ಕ್ರಮ ಅನುಸರಿಸಬೇಕು ?

ಐ ಅಶ್ವಂತ ಬಿ.ಎಸ್ ಮೈಸೂರು



ಸರ್ಕಾರಿ ಆದೇಶ ಸಂಖ್ಯೆ ಜಿಎಡಿ 4, ಎಸ್​ಆರ್​ಸಿ 73, ದಿನಾಂಕ 5.2.1973ರಲ್ಲಿ ಸರ್ಕಾರಿ ನೌಕರನು ಬಾಹ್ಯ ಅಥವಾ ಅಂಚೆ ತೆರಪಿನ ಮೂಲಕ ಉನ್ನತ ವ್ಯಾಸಂಗ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ನೀವು ಬಯಸಿದಂತೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪರಿಶಿಷ್ಟ 2ಎರಂತೆ ಸಂಬಳ ಸಹಿತವಾಗಿ ಉನ್ನತ ವ್ಯಾಸಂಗ ಮಾಡಲು ಅವಕಾಶವಿರುವುದಿಲ್ಲ. ಇದಕ್ಕೆ ಕಾರಣ ನಿಮ್ಮ ಹುದ್ದೆಗೆ ಅಂತಹ ಉನ್ನತ ವ್ಯಾಸಂಗ ಅವಶ್ಯಕವಾಗಿರುವುದಿಲ್ಲ. ನೀವು ಬಾಹ್ಯ ಅಭ್ಯರ್ಥಿಯಾಗಿ ಅಥವಾ ಸಂಜೆ ಕಾಲೇಜಿನ ವಿದ್ಯಾರ್ಥಿಯಾಗಿ ಸೇರಿ ನಿಮ್ಮ ಮೇಲಾಧಿಕಾರಿಗೆ ಮಾಹಿತಿ ನೀಡುವುದು.

ನಾನು ಸರ್ಕಾರಿ ನೌಕರನಾಗಿದ್ದು, ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ 2016ರ ಪ್ರಥಮ ಅಧಿವೇಶನದಲ್ಲಿ ಅಕೌಂಟ್ಸ್ ಹೈಯರ್ ಜನರಲ್ ಲಾ ಭಾಗ 1 ಮತ್ತು 2ನ್ನು ತೇರ್ಗಡೆ ಯಾಗಿದ್ದೇನೆ. ನನಗಿಂತ ಕಿರಿಯರು ಈ ಮೊದಲೇ ಈ ಪರೀಕ್ಷೆ ತೇರ್ಗಡೆಯಾಗಿದ್ದು ಅವರನ್ನು ಪದೋನ್ನತಿಗೆ ಅರ್ಹರೆಂದು ಪರಿಗಣಿಸಲಾಗಿದೆ. ಪರೀಕ್ಷೆಯ ಫಲಿತಾಂಶವನ್ನು ಆಯೋಗವು 22.7.2016ರಂದು ಪ್ರಕಟಿಸಿದೆ. ಪರೀಕ್ಷೆಯು 27.4.2016ರಂದು ನಡೆದಿರುತ್ತದೆ. ಈ ಹಿನ್ನೆಲೆ ಯಲ್ಲಿ ನಾನು ಯಾವ ದಿನಾಂಕದಂದು ಪದೋನ್ನತಿಗೆ ಅರ್ಹನಾಗುತ್ತೇನೆ?

| ಮಹೇಶ ಚಂದ್ರ ಚಿಕ್ಕಮಗಳೂರು

1974ರ ಕರ್ನಾಟಕ ಸಿವಿಲ್ ಸೇವಾ (ಕನ್ನಡ ಭಾಷಾ ಮತ್ತು ಸೇವಾ ಪರೀಕ್ಷೆಗಳು) ನಿಯಮಾವಳಿ ರೀತ್ಯ ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಸರ್ಕಾರಿ ನೌಕರನು ತನ್ನ ಹುದ್ದೆಗೆ ಸಂಬಂಧಿಸಿದಂತೆ ಪದೋನ್ನತಿ ಪಡೆಯಲು ಇಲಾಖಾ ಪರೀಕ್ಷೆಗಳನ್ನು ತೇರ್ಗಡೆಯಾಗಬೇಕಾದುದು ಕಡ್ಡಾಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೀವು ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವುದು ನಿಮ್ಮ ಪರೀಕ್ಷಾರ್ಥ ಅವಧಿ ಮತ್ತು ಪದೋನ್ನತಿಗೆ ಅವಶ್ಯಕ. ದಿನಾಂಕ 13.4.2010ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 01, ಸೆಸೆನಿ 2010ರಲ್ಲಿ ಸರ್ಕಾರಿ ನೌಕರನು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಪದೋನ್ನತಿಗೆ ಪರಿಗಣಿಸುವಾಗ ಅವನು ಇಲಾಖಾ ಪರೀಕ್ಷೆಯ ದಿನಾಂಕವನ್ನು ಪರಿಗಣಿಸದೇ ಆಯೋಗವು ಫಲಿತಾಂಶ ಪ್ರಕಟಿಸಿದ ದಿನಾಂಕವನ್ನು ಪದೋನ್ನತಿಗೆ ಅರ್ಹತಾದಾಯಕವೆಂದು ಪರಿಗಣಿಸಲು ಸೂಚಿಸಲಾಗಿದೆ. ಆದ ಕಾರಣ ನೀವು ದಿನಾಂಕ 22.7.2016ರಿಂದ ಅರ್ಹರಾಗಿರುತ್ತೀರಿ.
7/8/16

1995ರಿಂದ ರಾಜ್ಯ ಸರ್ಕಾರದಲ್ಲಿ ದ್ವಿ.ದ.ಸ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಹಿಂದೆ 1991ರಿಂದ ಸ್ಟೈಫಂಡರಿ ಪದವೀಧರನಾಗಿ ಕಾರ್ಯನಿರ್ವಹಿಸಿದ್ದೇನೆ. ನಾನೀಗ 2016ರ ಸೆಪ್ಟಂಬರ್ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದೇನೆ. ನನಗೆ ನಿವೃತ್ತಿ ವೇತನ ಸೌಲಭ್ಯ ನೀಡುವಾಗ ಸ್ಟೈಫಂಡರಿ ಪದವಿ ಸೇವೆ ಪರಿಗಣಿಸಲಾಗುತ್ತದೆಯೇ?

ಐ ಎಲ್.ಬೈರಪ್ಪಾಜಿ, ಮೈಸೂರು.

ದಿನಾಂಕ: 08.01.1998ರ ಸರ್ಕಾರಿ ಆದೇಶ ಸಂಖ್ಯೆ: ಎಸ್.ಡಬ್ಲೂ್ಯ.ಎಸ್.18ಎಲ್​ಇಟಿ94 ರಂತೆ ಸರ್ಕಾರವು ಸವೋಚ್ಛ ನ್ಯಾಯಾಲಯವು ದಿನಾಂಕ: 26.08.1992ರ ತೀರ್ಪಿನಂತೆ ಸರ್ಕಾರಿ ನೌಕರರು ದಿನಾಂಕ: 01.05.1991ರಿಂದ ಸ್ಟೈಪಂಡರಿ ಪದವೀಧರರಾಗಿ ಸಲ್ಲಿಸಿದ ಸೇವೆಯನ್ನು ನಿವೃತ್ತಿ ವೇತನದ ಸೌಲಭ್ಯಗಳಿಗಾಗಿ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೀವು ದಿನಾಂಕ: 01.05.1991ರಿಂದ ಸಲ್ಲಿಸಿದ ಸ್ಟೈಪಂಡರಿ ಪದವಿಯ ಅರ್ಹತೆಯನ್ನು ನಿಮ್ಮ ಪಿಂಚಣಿ ಸೌಲಭ್ಯಗಳಿಗೆ ಪರಿಗಣಿಸಬೇಕಾಗುತ್ತದೆ.



13-8-16.
ಯಾವ ದಿನಾಂಕದಂದು ಪದೋನ್ನತಿಗೆ ಅರ್ಹನಾಗುತ್ತೇನೆ?
ನಾನು ಸರ್ಕಾರಿ ನೌಕರನಾಗಿದ್ದು, ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ 2016ರ ಪ್ರಥಮ ಅಧಿವೇಶನದಲ್ಲಿ ಅಕೌಂಟ್ಸ್ ಹೈಯರ್ ಜನರಲ್ ಲಾ ಭಾಗ 1 ಮತ್ತು 2ನ್ನು ತೇರ್ಗಡೆ ಯಾಗಿದ್ದೇನೆ. ನನಗಿಂತ ಕಿರಿಯರು ಈ ಮೊದಲೇ ಈ ಪರೀಕ್ಷೆ ತೇರ್ಗಡೆಯಾಗಿದ್ದು ಅವರನ್ನು ಪದೋನ್ನತಿಗೆ ಅರ್ಹರೆಂದು ಪರಿಗಣಿಸಲಾಗಿದೆ. ಪರೀಕ್ಷೆಯ ಫಲಿತಾಂಶವನ್ನು ಆಯೋಗವು 22.7.2016ರಂದು ಪ್ರಕಟಿಸಿದೆ. ಪರೀಕ್ಷೆಯು 27.4.2016ರಂದು ನಡೆದಿರುತ್ತದೆ. ಈ ಹಿನ್ನೆಲೆ ಯಲ್ಲಿ ನಾನು ಯಾವ ದಿನಾಂಕದಂದು ಪದೋನ್ನತಿಗೆ ಅರ್ಹನಾಗುತ್ತೇನೆ?

| ಮಹೇಶ ಚಂದ್ರ ಚಿಕ್ಕಮಗಳೂರು

1974ರ ಕರ್ನಾಟಕ ಸಿವಿಲ್ ಸೇವಾ (ಕನ್ನಡ ಭಾಷಾ ಮತ್ತು ಸೇವಾ ಪರೀಕ್ಷೆಗಳು) ನಿಯಮಾವಳಿ ರೀತ್ಯ ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಸರ್ಕಾರಿ ನೌಕರನು ತನ್ನ ಹುದ್ದೆಗೆ ಸಂಬಂಧಿಸಿದಂತೆ ಪದೋನ್ನತಿ ಪಡೆಯಲು ಇಲಾಖಾ ಪರೀಕ್ಷೆಗಳನ್ನು ತೇರ್ಗಡೆಯಾಗಬೇಕಾದುದು ಕಡ್ಡಾಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೀವು ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವುದು ನಿಮ್ಮ ಪರೀಕ್ಷಾರ್ಥ ಅವಧಿ ಮತ್ತು ಪದೋನ್ನತಿಗೆ ಅವಶ್ಯಕ. ದಿನಾಂಕ 13.4.2010ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 01, ಸೆಸೆನಿ 2010ರಲ್ಲಿ ಸರ್ಕಾರಿ ನೌಕರನು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಪದೋನ್ನತಿಗೆ ಪರಿಗಣಿಸುವಾಗ ಅವನು ಇಲಾಖಾ ಪರೀಕ್ಷೆಯ ದಿನಾಂಕವನ್ನು ಪರಿಗಣಿಸದೇ ಆಯೋಗವು ಫಲಿತಾಂಶ ಪ್ರಕಟಿಸಿದ ದಿನಾಂಕವನ್ನು ಪದೋನ್ನತಿಗೆ ಅರ್ಹತಾದಾಯಕವೆಂದು ಪರಿಗಣಿಸಲು ಸೂಚಿಸಲಾಗಿದೆ. ಆದ ಕಾರಣ ನೀವು ದಿನಾಂಕ 22.7.2016ರಿಂದ ಅರ್ಹರಾಗಿರುತ್ತೀರಿ.
***

14-8-16
ನನ್ನ ಹಿಂದಿನ ವೇತನವೇ ಮುಂದುವರಿಯುತ್ತದೆಯೇ?
ನಾನು ಉಡುಪಿ ಜಿಲ್ಲೆಯಲ್ಲಿ ಗ್ರಾಮಕರಣಿಕನಾಗಿ ದಿನಾಂಕ 31.10.2013ರಂದು ಕರ್ತವ್ಯಕ್ಕೆ ಸೇರಿದ್ದು ಅಲ್ಲಿ ನನ್ನ ಖಾಯಂ ಪೂರ್ಣಾವಧಿ ಪೂರ್ಣಗೊಂಡಿರುತ್ತದೆ. ಅಲ್ಲಿ ಸೇವೆಯಲ್ಲಿರುವಾಗಲೇ ನಾನು ಜಿಲ್ಲಾಧಿಕಾರಿಯವರಿಂದ ನಿರಾಕ್ಷೇಪಣಾ ಪತ್ರ ಪಡೆದು ರಾಯಚೂರು ಜಿಲ್ಲೆಗೆ ಗ್ರಾಮಕರಣಿಕನಾಗಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದು ದಿನಾಂಕ 14.1.2016ರಂದು ಕರ್ತವ್ಯಕ್ಕೆ ಹಾಜರಾಗಿರುತ್ತೇನೆ. ನಾನು ಈ ಹಿಂದೆ ಮಾಡಿದ ಸೇವೆಯು ಪರಿಗಣಿತವಾಗುತ್ತದೆಯೇ? ಮತ್ತೆ ಮೊದಲಿನಿಂದ ಪರೀಕ್ಷಾರ್ಥ ಅವಧಿ ಪೂರ್ಣಗೊಳಿಸಬೇಕೇ? ನನ್ನ ಹಿಂದಿನ ವೇತನವೇ ಮುಂದುವರಿಯುತ್ತದೆಯೇ?

ಐ ಸೋಮರಾಯ ರಾಯಚೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮವಳಿಯ ನಿಯಮ 252 ಬಿ ರಂತೆ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯದಿಂದ ಬಿಡುಗಡೆ ಹೊಂದಿ ರಾಯಚೂರು ಜಿಲ್ಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದರೆ ನಿಮ್ಮ ಹಿಂದಿನ ಸೇವೆಯು ಪರಿಗಣಿತವಾಗುತ್ತದೆ. ನೀವು ಬೇರೊಂದು ನೇಮಕಾತಿ ಪ್ರಾಧಿಕಾರಕ್ಕೆ ಅದೇ ಹುದ್ದೆಗೆ ನಿಯುಕ್ತಿ ಗೊಂಡಿರು ವುದರಿಂದ ಮತ್ತೆ ಪರೀಕ್ಷಾರ್ಥ ಅವಧಿಯನ್ನು 1977ರ ಕರ್ನಾಟಕ ಸಿವಿಲ್ ಸೇವಾ (ಪ್ರೊಬೇಷನ್) ನಿಯಮಾವಳಿ ರೀತ್ಯ ಪೂರ್ಣಗೊಳಿಸಬೇಕಾಗಿರುತ್ತದೆ. ನೀವೇ ತಿಳಿಸಿದಂತೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41ಎ ರಂತೆ ನಿಮಗೆ ವೇತನ ರಕ್ಷಣೆ ದೊರಕಲಿದ್ದು ನೀವು ಉಡುಪಿಯಲ್ಲಿ ಪಡೆದ ಅಂತಿಮ ವೇತನವೇ ಪ್ರಸ್ತುತ ಹೊಸ ಹುದ್ದೆಗೂ ಅನ್ವಯವಾಗುತ್ತದೆ.
***

15-8-16.
ಖಾಯಂ ಪೂರ್ವ ಸೇವೆಗಾಗಿ ಸೇವೆ ಸಲ್ಲಿಸಬೇಕೆ?
ನಾನು ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆ ನೌಕರನಾಗಿ 2014ರಲ್ಲಿ ನೇಮಕಹೊಂದಿ ದಿನಾಂಕ 7.2.2014ರಂದು ಕರ್ತವ್ಯಕ್ಕೆ ಹಾಜರಾಗಿ ನನ್ನ ಪರೀಕ್ಷಾರ್ಥ ಅವಧಿಯು 8.2.2016ಕ್ಕೆ ಮುಕ್ತಾಯವಾಗಿದೆ. ಈಗ ನಾನು ಇದೇ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ಆಯ್ಕೆಗೊಂಡಿದ್ದೇನೆ. ಈಗ ಪುನಃ ನಾನು ಖಾಯಂ ಪೂರ್ವ ಸೇವೆಗಾಗಿ ಸೇವೆ ಸಲ್ಲಿಸಬೇಕೆ? ಅಥವಾ ಡಿ ದರ್ಜೆ ನೌಕರನಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಲಾಗುತ್ತದೆಯೇ.

ಐರಾಜು ಬೆಣ್ಣೆ ಉಡುಪಿ ಜಿಲ್ಲೆ
ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೇಷನ್ ) ನಿಯಮಗಳು 1977ರಡಿಯಲ್ಲಿ ಸರ್ಕಾರಿ ಸೇವೆಯ ಪ್ರತಿಯೊಂದು ಗುಂಪಿನ ಮತ್ತು ವೃಂದಕ್ಕೆ 2 ವರ್ಷಗಳ ಕಾಲ ಪ್ರೊಬೇಷನ್ ಅವಧಿ ನಿಗದಿಪಡಿಸಲಾಗಿದೆ. ನೀವು ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆ ನೌಕರರಾಗಿ ಸಿ ಗುಂಪಿನ ಕಿರಿಯ ಆರೋಗ್ಯ ಸಹಾಯಕರ ಹುದ್ದೆಗೆ ಆಯ್ಕೆಯಾಗಿರುವುದು ಸರಿ. ಆದರೆ ನೀವು ಡಿ ದರ್ಜೆ ವೃಂದವೇ ಬೇರೆ, ಕಿರಿಯ ಆರೋಗ್ಯ ಸಹಾಯಕರ ವೃಂದವೇ ಬೇರೆ ಬೇರೆಯಾಗಿರುವುದರಿಂದ ನೀವು ಮತ್ತೆ 2 ವರ್ಷಗಳ ಕಾಲ ಹೊಸ ಹುದ್ದೆಯಲ್ಲಿ ಪೊಬೇಷನ್ ಅವಧಿಯನ್ನು ಪೂರೈಸಬೇಕಾಗುತ್ತದೆ.
***

16-8-16
ಸರ್ಕಾರಿ ನೌಕರನೊಬ್ಬ ಜಿಲ್ಲಾಧಿಕಾರಿಗಳಿಂದ ಸ್ಪೋಟಕ ವಸ್ತುಗಳ ಪರವಾನಗಿ ಪತ್ರವನ್ನು ಪಡೆದು ಪಟಾಕಿ ಮಾರಾಟ ಮಾಡಬಹುದೇ?

| ಕುಮಾರಸ್ವಾಮಿ ಸಾಗರ

ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 16ರಲ್ಲಿ ಸರ್ಕಾರಿ ನೌಕರನು ಸರ್ಕಾರದಿಂದ ಪೂರ್ವಾನುಮತಿ ಪಡೆಯದೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ವ್ಯಾಪಾರ ಅಥವಾ ವ್ಯವಹಾರದಲ್ಲಿ ತೊಡಗತಕ್ಕದ್ದಲ್ಲ. ಯಾವುದೇ ಇತರೇ ಉದ್ಯೋಗವನ್ನು ಕೈಗೊಳ್ಳತಕ್ಕದ್ದಲ್ಲವೆಂದು ಸೂಚಿಸಲಾಗಿದೆ. ಈ ನಿಯಮಾವಳಿಯ ಹಿನ್ನೆಲೆಯಲ್ಲಿ ನೀವು ಕೋರಿದಂತೆ ಸರ್ಕಾರಿ ನೌಕರನು ಪಟಾಕಿ ಮಾರಾಟ ಮಾಡುವುದು ನಿಯಮಾವಳಿಗೆ ವ್ಯತಿರಿಕ್ತವಾಗಿದ್ದು ಶಿಸ್ತುಕ್ರಮಕ್ಕೆ ಒಳಗಾಗುತ್ತಾನೆ.
***




8/8/16
ದಿನಾಂಕ: 27.08.1998ರಲ್ಲಿ ಸೇವೆಗೆ ಸೇರಿದ್ದು, 18 ವರ್ಷಗಳಾಗಿದೆ. ನಾನು ಕೆಎಸ್​ಓಯು ಮೈಸೂರಿನಲ್ಲಿ ಬಿ.ಇಡಿ (ಕನ್ನಡ) ಮಾಡಿದ್ದೇನೆ. ನನ್ನ ಬಿ.ಇಡಿ ವಿವರವನ್ನು ಸೇವಾ ಪುಸ್ತಕದಲ್ಲಿ ನಮೂದಿಸಬೇಕೆಂದಿದ್ದೇನೆ. ಸೇವಾವಧಿ ಪುಸ್ತಕದಲ್ಲಿ ನಮೂದಿಸಿದ ನಂತರ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2, ಬಡ್ತಿ ಬಂದಲ್ಲಿ, ನನಗೆ ಸ್ಥಳದ ಆಯ್ಕೆ ಸರಿಬರಲಿಲ್ಲವೆಂದರೆ ತಿರಸ್ಕರಿಸಬೇಕೆಂದಿದ್ದೇನೆ. ತಿರಸ್ಕರಿಸಿದರೆ 20 ವರ್ಷದ ಹೆಚ್ಚುವರಿ ವೇತನ ಬಡ್ತಿ ಪಡೆಯಬಹುದೇ?

| ರಾಮಕೃಷ್ಣ ಎಸ್. ರಾಮನಗರ

ದಿನಾಂಕ: 09.05.2002ರ ಸರ್ಕಾರಿ ಆದೇಶ ಸಂಖ್ಯೆ: ಎಫ್​ಡಿ 13 ಎಸ್​ಆರ್​ಪಿ 2002 ರಂತೆ ಮೊದಲ ಹದಿನಾಲ್ಕು ವೇತನ ಶ್ರೇಣಿಗಳಲ್ಲಿ ಯಾವುದೇ ಒಂದು ಹುದ್ದೆಯಲ್ಲಿ 20 ವರ್ಷಗಳ ಅವಧಿಯಲ್ಲಿ ಒಂದು ಪದೋನ್ನತಿ ಪಡೆಯದೆ ಮುಂದುವರೆದಿರುವ ಸರ್ಕಾರಿ ನೌಕರರಿಗೆ ಆ ಹುದ್ದೆಗೆ ನಿಗಧಿಪಡಿಸಲಾದ ವೇತನ ಶ್ರೇಣಿಯಲ್ಲಿ ಅಥವಾ ಆಯ್ಕೆ ಕಾಲಿಕ ಅಥವಾ ಹಿರಿಯ ವೇತನ ಶ್ರೇಣಿಯಲ್ಲಿ ಒಂದು ಹೆಚ್ಚುವರಿ ವೇತನ ಬಡ್ತಿ ನೀಡಬಹುದೆಂದು ಸೂಚಿಸಲಾಗಿದೆ. ಆದರೆ, ಇದೇ ಆದೇಶದ ಕಂಡಿಕೆ 6(2)ರ ರೀತ್ಯಾ ಸ್ವ-ಇಚ್ಛೆಯಿಂದ ತಮ್ಮ ಪದೋನ್ನತಿ ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲವೆಂದು ತಿಳಿಸಲಾಗಿದೆ. ಈ ಅಂಶದ ಹಿನ್ನೆಲೆಯಲ್ಲಿ ನೀವು 20 ವರ್ಷವಾಗುವ ಮೊದಲು ಪದೋನ್ನತಿ ತಿರಸ್ಕರಿಸಿದಲ್ಲಿ ಈ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗಿರುವುದಿಲ್ಲ.

9/8/16
ಸರ್ಕಾರಿ ಸೇವೆಯಲ್ಲಿದ್ದ ನನ್ನ ಪತಿ ನಿಧನರಾಗಿದ್ದು, ಸುಮಾರು 15 ವರ್ಷಗಳಿಂದ ಕುಟುಂಬ ಪಿಂಚಣಿ ಪಡೆಯುತ್ತಿದ್ದೇನೆ. ನಾಲ್ವರು ಮಕ್ಕಳಿದ್ದು, ಒಬ್ಬಳು(45) ಅವಿವಾಹಿತಳಾಗಿದ್ದು, ಮಾನಸಿಕವಾಗಿ ಸುಸ್ಥಿತಿಯಲ್ಲಿಲ್ಲ. ನನ್ನ ನಂತರ ಅವಳಿಗೆ ಕುಟುಂಬ ಪಿಂಚಣಿ ಸಿಗುತ್ತದೆಯೇ? ಅದಕ್ಕಾಗಿ ಏನು ಮಾಡಬೇಕು?

ಐಮೀನಾಕ್ಷಮ್ಮ, ಬೆಂಗಳೂರು.

ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ನಿವೃತ್ತಿ ವೇತನ) ನಿಯಮಗಳು 2002ರ ನಿಯಮ 9 (ಡಿ) ರೀತ್ಯಾ ಕುಟುಂಬ ನಿವೃತ್ತಿ ವೇತನವನ್ನು ಮಾನಸಿಕವಾಗಿ ಅಸ್ವಸ್ಥರಾಗಿರುವ ಅಥವಾ ಮನೋವೈಕಲ್ಯದಿಂದ ಬಳಲುತ್ತಿರುವ ಮಗ ಅಥವಾ ಮಗಳ ಹೆಸರಿಗೆ ನೀಡತಕ್ಕದ್ದು. ಅದನ್ನು ಜೀವಿತ ಅವಧಿಯವರೆಗೆ ಸಂದಾಯ ಮಾಡತಕ್ಕದ್ದೆಂದು ತಿಳಿಸಿದೆ. ಈ ಹಿನ್ನೆಲೆ ನೀವು ನಿಮ್ಮ ಮಗಳ ಮನೋ ವೈಕಲ್ಯತೆಗೆ ನಿಮ್ಹಾನ್ಸ್​ನಿಂದ ಪ್ರಮಾಣ ಪತ್ರ ಪಡೆದು ಕುಟುಂಬ ಪಿಂಚಣಿ ಪಡೆಯುತ್ತಿರುವ ಸರ್ಕಾರಿ ಖಜಾನೆಗೆ ಮತ್ತು ಮಹಾಲೇಖಪಾಲಕರಿಗೆ ನಿಮ್ಮ ನಿಧನದ ನಂತರ ಮಗಳಿಗೆ ನೀಡುವಂತೆ ಈಗಲೇ ಮನವಿ ಸಲ್ಲಿಸಿ.
10/8/16
ನಾನು ಬಿಎಂಸಿಆರ್​ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಗಸ್ಟ್ 2012ರಿಂದ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೂಲತಃ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿ. ಅರ್ಜಿ ಸಲ್ಲಿಸುವಾಗ ಮೀಸಲಾತಿಯಲ್ಲಿ ಶುಶ್ರೂಷಕಿ ಹುದ್ದೆಗೆ ಅರ್ಜಿ ಸಲ್ಲಿಸಿರುತ್ತೇನೆ. ಆದರೆ ಹೆಚ್ಚು ಅಂಕ ಗಳಿಸಿರುವ ಕಾರಣ ನನ್ನನ್ನು ಸಾಮಾನ್ಯ ವರ್ಗದ ಅಭ್ಯರ್ಥಿ ಎಂದು ಪರಿಗಣಿಸಿ ಸಾಮಾನ್ಯ ವರ್ಗದಲ್ಲಿ ನೇಮಕಾತಿ ಮಾಡಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಜೂನ್ ತಿಂಗಳಲ್ಲಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದ್ದು ಅದರಲ್ಲಿ ನನ್ನನ್ನು ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಪರಿಗಣಿಸದೆ ಸಾಮಾನ್ಯ ವರ್ಗದ ಅಭ್ಯರ್ಥಿ ಎಂದು ಪರಿಗಣಿಸಿ, ನನಗಿಂತ ಕಡಿಮೆ ಅಂಕ ಹೊಂದಿರುವ ಪರಿಶಿಷ್ಟ ಜಾತಿಯ ನೌಕರನಿಗೆ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಸೇರಿಸಿದ್ದಾರೆ, ನನ್ನನ್ನು ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಪರಿಗಣಿಸುವುದು ಸಾಧ್ಯವಿದೆಯೆ?

ಐ ಶ್ರೀಮತಿ ಪಾಪತಿ ಪಿ. ಬೆಂಗಳೂರು

ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ ನಿಯಮಗಳು) 1957ರ ನಿಯಮ 4(ಎ)ರಂತೆ ಆಯ್ಕೆ ಮಾಡುವ ನೇಮಕಾತಿ ಪ್ರಾಧಿಕಾರವು ಅಭ್ಯರ್ಥಿಗಳನ್ನು ಯಾವ ಅರ್ಹತಾ ಕ್ರಮದಲ್ಲಿ ವ್ಯವಸ್ಥೆಗೊಳಿಸಿದೆಯೋ, ಆ ಆದೇಶದ ವೃಂದಗಳು ಅಥವಾ ಹುದ್ದೆಯ ವರ್ಗದಿಂದ ಆಯ್ಕೆ ಮಾಡುವ ಮೂಲಕ ಹುದ್ದೆಯ ವರ್ಗಕ್ಕೆ ಬಡ್ತಿ ನೀಡುವಾಗ ಅವರ ಜೇಷ್ಠತೆ ಪರಿಗಣಿಸಬೇಕು ಎಂದು ತಿಳಿಸಿದೆ. ಅಲ್ಲದೆ 1990ರ ಅನುಸೂಚಿತ ಜಾತಿಗಳು, ಬುಡಕಟ್ಟು ಮತ್ತು ಇತರೆ ಹಿಂದುಳಿದ ವರ್ಗಗಳ(ನೇಮಕಾತಿಗಳು) ಮುಂತಾದವುಗಳ ಮೀಸಲಾತಿ ಅಧಿನಿಯಮದಂತೆ ಅಭ್ಯರ್ಥಿಯು ಮೀಸಲಾತಿಯಡಿ ಆಯ್ಕೆಯಾಗಿದ್ದರೆ, ಅದೇ ಮೀಸಲಾತಿಯಲ್ಲಿ ಪದೋನ್ನತಿ ಪರಿಗಣಿಸಬೇಕು. ಆದರೆ, ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಯು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿದ್ದಲ್ಲಿ, ಪದೋನ್ನತಿ ನೀಡುವಾಗ ಪರಿಶಿಷ್ಟ ಜಾತಿ ಮೀಸಲಾತಿ ಪರಿಗಣಿಸಲು ಸೂಚಿಸಿದೆ. ಅಲ್ಲದೆ ಸೇವಾ ಪುಸ್ತಕದಲ್ಲಿ ಸಂಬಂಧಿಸಿದ ಅಂಕಣದಲ್ಲಿ ಪರಿಶಿಷ್ಟ ಜಾತಿ ನಮೂದಿಸಬೇಕು. ಆದ ಕಾರಣ ನಿಮ್ಮ ನೇಮಕಾತಿ ಪ್ರಾಧಿಕಾರಿಯವರು ನಿಮಗಿಂತ ಕಡಿಮೆ ಅಂಕ ಹೊಂದಿರುವ ಪರಿಶಿಷ್ಟ ಜಾತಿಯ ನೌಕರನಿಗೆ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಸೇರಿಸಿರುವುದು ಸರಿಯಾದ ಕ್ರಮವಲ್ಲ. (ಹೆಚ್ಚಿನ ವಿವರಗಳಿಗೆ ಲ.ರಾಘವೇಂದ್ರರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕ ನೋಡಿ, ಪ್ರತಿಗಳಿಗೆ ಮೊ: 9481244434ನ್ನು ಸಂರ್ಪಸಿ)

11/8/16
ನಾನು ಮೊದಲು ಆಸ್ಪತ್ರೆಯಲ್ಲಿ ಗ್ರೂಪ್ ಡಿಯಾಗಿ 16 ತಿಂಗಳು ಕಾರ್ಯನಿರ್ವಹಿಸಿದ್ದು, ದಿನಾಂಕ: 21.07.2015ರಂದು ವೈಯಕ್ತಿಕ ಕಾರಣಗಳಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ನಂತರ ಶಿಕ್ಷಕಿಯಾಗಿ ನೇಮಕವಾಗಿ ದಿನಾಂಕ: 15.03.2016ರಂದು ಕೆಲಸಕ್ಕೆ ಹಾಜರಾಗಿದ್ದೇನೆ. ಹಿಂದೆ ಮಾಡಿಸಿದ್ದ ಎನ್​ಪಿಎಸ್ ಕ್ಲೋಸ್ ಮಾಡಲು ಅರ್ಜಿ ಸಲ್ಲಿಸಿದ್ದು, ಇದರಿಂದ ಮತ್ತೊಂದು ಎನ್​ಪಿಎಸ್ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಈಗ ನಾನು ಎನ್​ಪಿಎಸ್ ಮಾಡಿಸಲು ಏನು ಮಾಡಬೇಕು? ದಯವಿಟ್ಟು ಪರಿಹಾರ ತಿಳಿಸಿ.

ಐ ಸುಮತಿ, ಮೈಸೂರು.

ದಿನಾಂಕ: 29.03.2010ರ ಸರ್ಕಾರಿ ಅದೇಶದಂತೆ ಸಂಖ್ಯೆ: ಎಫ್​ಡಿ(ಎಫ್​ಪಿಎಲ್) 28 ಪಿಇಎನ್ 2009ರಂತೆ ನೂತನ ಪಿಂಚಣಿ ಯೋಜನೆಗೆ ನೀವು ನೋಂದಣಿ ಮಾಡಿಸಿರುವುದರಿಂದ ಹಾಗೂ ದಿನಾಂಕ: 10.01.2012ರ ಸರ್ಕಾರಿ ಸುತ್ತೋಲೆ ಆ.ಇ.(ವಿಶೇಷ)01 ಪಿಇಎನ್ 2010ರಂತೆ ಟ್ರಾನ್ ನಂ. ಪಡೆದಿರುವುದರಿಂದ ನೀವು ಹಿಂದಿನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡಿರುವುದರಿಂದ ಹೊಸ ಎನ್​ಪಿಎಸ್ ಖಾತೆ ಮಾಡಬೇಕು. ಇದಕ್ಕೆ ಕಾರಣ, 9 ತಿಂಗಳ ಕಾಲ ನೀವು ಸರ್ಕಾರಿ ಸೇವೆಯಲ್ಲೇ ಇಲ್ಲದ್ದರಿಂದ ನಿಮ್ಮ ಹಿಂದಿನ ಖಾತೆ ಮುಕ್ತಾಯಗೊಂಡಿದ್ದು, ಅದನ್ನು ವಾಪಸ್ಸು ಪಡೆಯಬೇಕು. ಆದ್ದರಿಂದ ಈ ಆದೇಶಗಳ ಹಿನ್ನೆಲೆ ನೀವು ಹೊಸದಾಗಿ ಎನ್​ಪಿಎಸ್ ಲೆಕ್ಕ ತೆರೆಯಬೇಕೆಂದು ಸಕ್ಷಮ ವೇತನ ಬಟವಾಡೆ ಅಧಿಕಾರಿಗಳಿಗೆ ವಿನಂತಿಸಬೇಕು.
12/8/16
ನಾನು ಸರ್ಕಾರಿ ನೌಕರನಾಗಿದ್ದು ನನ್ನ ಮೇಲೆ ಆರೋಪ ಹೊರಿಸಿ ಶಿಸ್ತು ಪ್ರಾಧಿಕಾರಿಯವರು ಇಲಾಖಾ ವಿಚಾರಣೆ ನಡೆಸುತ್ತಿದ್ದಾರೆ. ನನ್ನ ಮೇಲಿನ ಆರೋಪಗಳು ಕ್ಷುಲ್ಲಕವಾಗಿದ್ದು, ಈ ಇಲಾಖಾ ವಿಚಾರಣೆಗೆ ಸರ್ಕಾರದ ಕಾರ್ಯದರ್ಶಿ ಅಥವಾ ಸಂಬಂಧಿಸಿದ ಸಚಿವರು ಮಧ್ಯಂತರ ತಡೆಯಾಜ್ಞೆ ನೀಡಬಹುದೆ?

ಐ ವಿರೂಪಾಕ್ಷ ಗೌಡ ಗದಗ

ಸಿಸಿಎ ನಿಯಮಾವಳಿಗಳಲ್ಲಾಗಲೀ ಅಥವಾ ಇತರೆ ಯಾವುದೇ ಕಾನೂನಿನಲ್ಲಾಗಲೀ ಯಾವುದೇ ಕಾರಣಕ್ಕೆ ಪ್ರಗತಿಯಲ್ಲಿರುವ ಶಿಸ್ತು ನಡವಳಿಕೆಗಳನ್ನು ತಡೆಹಿಡಿಯುವ ಅಧಿಕಾರ ಯಾವುದೆ ಆಡಳಿತಾತ್ಮಕ ಪ್ರಾಧಿಕಾರಕ್ಕೆ ಇಲ್ಲ. ಇಲ್ಲಿ ಆಡಳಿತಾತ್ಮಕ ಪ್ರಾಧಿಕಾರವೆಂದರೆ ನ್ಯಾಯಾಲಯವಲ್ಲದ ಪ್ರಾಧಿಕಾರ ಮತ್ತು ಸಿಸಿಎ ನಿಯಮಾವಳಿಗಳ ರೀತಿ ಅಪೀಲು ಮತ್ತು ಪುನರಾವಲೋಕನ ಪ್ರಾಧಿಕಾರಗಳು ಒಳಗೊಳ್ಳುತ್ತಾರೆ. ಕಾನೂನು ಬದ್ಧ ಶಿಸ್ತು ಪ್ರಾಧಿಕಾರಿ ಸಿಸಿಎ ನಿಯಮಗಳಡಿಯಲ್ಲಿ ಕ್ರಮ ಜರುಗಿಸಲು ಸ್ವತಂತ್ರ ಪ್ರಾಧಿಕಾರಿಯಾಗಿರುತ್ತಾರೆ. ಯಾವುದೇ ಆಡಳಿತಾತ್ಮಕ ಶ್ರೇಣಿಯ ಅಧಿಕಾರಿಯ ಹಿಡಿತದಲ್ಲಿ ಅವನು ಬರುವುದಿಲ್ಲ. ತಿಳಿದೋ ಅಥವಾ ತಿಳಿಯದೆಯೋ ಅವನು ತಪ್ಪುಗಳನ್ನು ಮಾಡುತ್ತಿದ್ದರೂ ಸಹ ಅವನ ಮೇಲಾಧಿಕಾರಿಗಳು ಮಧ್ಯೆ ಪ್ರವೇಶಿಸುವಂತಿಲ್ಲ. ಶಿಸ್ತು ಪ್ರಾಧಿಕಾರಿ ಶಿಸ್ತು ನಡವಳಿಗಳಲ್ಲಿ ಅಂತಿಮ ಆದೇಶ ಮಾಡಿದಾಗ ಮಾತ್ರ ಸಿಸಿಎ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಿದ ಅಪೀಲು ಪ್ರಾಧಿಕಾರಗಳು ಅಂತಹ ಅಂತಿಮ ಆದೇಶವನ್ನು ಹೊರಡಿಸಬಹುದು. ಅಲ್ಲದೆ ದುರುದ್ದೇಶಪೂರಿತ ಶಿಸ್ತು ನಡವಳಿಗಳೆಂದು ನ್ಯಾಯಾಲಯ ಭಾವಿಸದ ಹೊರತು ನ್ಯಾಯಾಲಯಗಳೂ ಸಹ ಪ್ರಗತಿಯಲ್ಲಿರುವ ಶಿಸ್ತು ಕ್ರಮಗಳಿಗೆ ಮಧ್ಯೆ ಪ್ರವೇಶಿಸುವಂತಿಲ್ಲ. ಹೀಗಾಗಿ ಸರ್ಕಾರದ ಕಾರ್ಯದರ್ಶಿಯಾಗಲೀ ಅಥವಾ ಸಚಿವರಾಗಲೀ ಮಧ್ಯಂತರ ತಡೆಯಾಜ್ಞೆ ನೀಡಲು ಬರುವುದಿಲ್ಲ.

ದಿನದ ಪ್ರಶ್ನೆ 3/8/16

ನಾನು ದಿನಾಂಕ: 25.06.2007ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸರ್ಕಾರಿ ಸೇವೆಗೆ ಸೇರಿದ್ದು, 2010ರಲ್ಲಿ ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ (ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ) ವರ್ಗಾವಣೆ ಪಡೆದಿರುತ್ತೇನೆ. ನಾನು ನನ್ನ ಪತಿಯೂ ಸರ್ಕಾರಿ ನೌಕರರಾಗಿದ್ದು, ಈಗ ಪತಿ-ಪತ್ನಿ ಪ್ರಕರಣದಲ್ಲಿ ನಾನು ಇನ್ನೊಂದು ಘಟಕಕ್ಕೆ ವರ್ಗಾವಣೆ ಪಡೆಯಲು ಅವಕಾಶ ಇದೆಯೇ?

ಆಶಾರಾಣಿ.ಎ.ಎಸ್ ಹಾಸನ ಜಿಲ್ಲೆ

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2007ರ ಸೆಕ್ಷನ್ 6 (2) (1)ರ ರೀತ್ಯಾ ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಮತ್ತು ಶಿಕ್ಷಕರು ಪ್ರಸ್ತುತ ಇರುವ ಜ್ಯೇಷ್ಠತಾ ಘಟಕದಲ್ಲಿ ಕನಿಷ್ಠ 3 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಲ್ಲಿ ಕೌನ್ಸಿಲಿಂಗ್ ಮೂಲಕ ಪತ್ನಿ ಅಥವಾ ಪತಿಯು ಸೇವೆ ಸಲ್ಲಿಸುತ್ತಿರುವ ಸ್ಥಳಕ್ಕೆ ಅಥವಾ ಹತ್ತಿರದ ಸ್ಥಳಕ್ಕೆ ಸ್ಪಷ್ಟ ಖಾಲಿ ಸ್ಥಳದ ಲಭ್ಯತೆ ಆಧಾರದ ಮೇಲೆ ಸೇವಾ ಅವಧಿಯಲ್ಲಿ ಎರಡು ಬಾರಿಗಿಂತ ಹೆಚ್ಚಿಲ್ಲದೆ ವರ್ಗಾವಣೆ ಮಾಡಬಹುದು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ನೀವು ಮತ್ತೊಮ್ಮೆ ಇನ್ನೊಂದು ಘಟಕಕ್ಕೆ ವರ್ಗಾವಣೆ ಪಡೆಯಬಹುದು.

4/8/16
ನಾನು ದಿನಾಂಕ: 12.05.2016ರಂದು ಹಿರಿಯ ಆರೋಗ್ಯ ಸಹಾಯಕರ ಹುದ್ದೆಗೆ ಸ್ಥಾನಪನ್ನ ಪದೋನ್ನತಿಯನ್ನು ಪಡೆದುಕೊಂಡು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತೇನೆ ಹಾಗೂ ಹಿಂದಿನ ವೇತನದಲ್ಲಿಯೇ ಅಕ್ಟೋಬರ್-2016ರವರೆಗೆ ಮುಂದುವರೆಯುವುದಾಗಿ ಘೊಷಣೆ ಪತ್ರವನ್ನು ಬರೆದುಕೊಟ್ಟಿರುತ್ತೇನೆ. ಒಂದು ವೇಳೆ ನನಗೆ ಪದೋನ್ನತಿ ಬಾರದೆ ಇದ್ದಲ್ಲಿ ದಿನಾಂಕ: 20.10.2016ಕ್ಕೆ 20 ವರ್ಷದ ಕಾಲಮಿತಿ ಬಡ್ತಿಗೆ ಅರ್ಹನಿರುತ್ತಿದ್ದೆ. ಈಗ ನಾನು ಸ್ಥಾನಪನ್ನ ಪದೋನ್ನತಿ ಪಡೆದಿರುವುದರಿಂದ 20 ವರ್ಷದ ಕಾಲಮಿತಿ ಬಡ್ತಿಗೆ ಅರ್ಹನಿರುವೆನೆ? ಇದ್ದಲ್ಲಿ ಯಾವ ನಿಯಮದ ಪ್ರಕಾರ ಇರುತ್ತದೆ.

ವೆಂಕಟನರಸಪ್ಪ.ಎಂ.ವಿ ಚಿಕ್ಕಬಳ್ಳಾಪುರ.

ದಿನಾಂಕ: 09.05.2002ರ ಸರ್ಕಾರಿ ಆದೇಶ ಸಂಖ್ಯೆ: ಎಫ್.ಡಿ.13.ಎಸ್.ಆರ್.ಪಿ.2002 ರಂತೆ ಮೊದಲ ಹದಿನಾಲ್ಕು ವೇತನ ಶ್ರೇಣಿಗಳಲ್ಲಿ ಯಾವುದೇ ಒಂದು ಹುದ್ದೆಯಲ್ಲಿ 20 ವರ್ಷಗಳ ಅವಧಿಯಲ್ಲಿ ಒಂದು ಪದೋನ್ನತಿ ಪಡೆಯದೆ ಮುಂದುವರೆದಿರುವ ಸರ್ಕಾರಿ ನೌಕರರಿಗೆ ಆ ಹುದ್ದೆಗೆ ನಿಗದಿಪಡಿಸಲಾದ ವೇತನ ಶ್ರೇಣಿಯಲ್ಲಿ ಅಥವಾ ಆಯ್ಕೆಕಾಲಿಕ ಅಥವಾ ಹಿರಿಯ ವೇತನ ಶ್ರೇಣಿಯಲ್ಲಿ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ನೀಡಬಹುದೆಂದು ಸೂಚಿಸಲಾಗಿದೆ. ಆದರೆ, ಇದೇ ಆದೇಶದ ಕಂಡಿಕೆ 6(2)ರ ರೀತ್ಯಾ ಈಗಾಗಲೇ ಒಂದು ಪದೋನ್ನತಿಯನ್ನು ಪಡೆದಿರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲವೆಂದು ತಿಳಿಸಲಾಗಿದೆ. ಈ ಅಂಶದ ಹಿನ್ನೆಲೆಯಲ್ಲಿ ನೀವು ಐದು ತಿಂಗಳಗಿಂತ ಮೊದಲೇ 20 ವರ್ಷವಾಗುವ ಮೊದಲು ಪದೋನ್ನತಿ ಪಡೆದಿರುವುದರಿಂದ ಈ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗಿರುವುದಿಲ್ಲ.

6/8/16
ನಮ್ಮ ಕಚೇರಿಯಲ್ಲಿ ಎಸ್​ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಒಬ್ಬರಿಗೆ ಮದುವೆಯಾಗಿ ಒಂದು ತಿಂಗಳಿಗೆ ಅವರ ಪತಿ ಮರಣ ಹೊಂದಿದ್ದರಿಂದ ಅನುಕಂಪದ ಆಧಾರದ ಮೇಲೆ ಈ ಕೆಲಸ ಕೊಡಲಾಗಿದೆ. ಸುಮಾರು 5-6 ವರ್ಷಗಳ ನಂತರ ಇವರು ಮತ್ತೊಬ್ಬರೊಂದಿಗೆ ವಿವಾಹವಾಗಿದ್ದಾರೆ. ಇವರು ಗರ್ಭಿಣಿಯಾದರೆ ನಿಯಮಾವಳಿ ರೀತ್ಯಾ ಪ್ರಸೂತಿ ರಜೆ ಮಂಜೂರು ಆಗುವುದಿಲ್ಲ ಎಂದು ಕಚೇರಿಯಲ್ಲಿ ಎಲ್ಲರೂ ಹೇಳುತ್ತಿದ್ದಾರೆ. ಈ ಗೊಂದಲಕ್ಕೆ ಪರಿಹಾರ ತಿಳಿಸಿ.

ನೇತ್ರಾವತಿ ಗಂಗಾವತಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ರೀತ್ಯಾ ಮಹಿಳಾ ಸರ್ಕಾರಿ ನೌಕರರಿಗೆ ಸಕ್ಷಮ ಅಧಿಕಾರಿಯು ಹೆರಿಗೆ ರಜೆಯನ್ನು ಆರಂಭದ ದಿನಾಂಕದಿಂದ 180 ದಿನಗಳವರೆಗೆ ಮಂಜೂರು ಮಾಡಬಹುದು. ಈ ರಜೆಯನ್ನು ಎರಡು ಜೀವಂತ ಮಕ್ಕಳಿಗೆ ಮಾತ್ರ ಮಹಿಳಾ ಸರ್ಕಾರಿ ನೌಕರರಿಗೆ ಲಭ್ಯವಾಗುತ್ತದೆ. ಆದರೆ ಇವರು ಎರಡನೇ ಮದುವೆ ಆಗುವುದಕ್ಕೆ ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು ನಿಯಮ 28ರಂತೆ ಸಕ್ಷಮ ಅಧಿಕಾರಿಯ ಅನುಮತಿಯನ್ನು ಪಡೆಯಬೇಕು.
*****>>02/08/2016

ನಾನು ಸರ್ಕಾರಿ ಸೇವೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ 20 ವರ್ಷ ಸೇವೆ ಸಲ್ಲಿಸಿದ್ದು, ಶೀಘ್ರದಲ್ಲೇ ಕಚೇರಿ ಅಧೀಕ್ಷಕ ಹುದ್ದೆಗೆ ಪದೋನ್ನತಿ ಲಭ್ಯವಾಗಲಿದೆ. ಆದರೆ ನನಗೆ 2014-15ನೇ ಸಾಲಿನ ಕಾರ್ಯನಿರ್ವಹಣಾ ವರದಿಯನ್ನು ಹಿಂದಿನ ಅಧಿಕಾರಿಗಳು ನೀಡದೇ ಇರುವುದರಿಂದ ಇಲಾಖಾ ಪದೋನ್ನತಿ ಸಮಿತಿಗೆ ನನಗೆ ಪದೋನ್ನತಿ ನೀಡಲು ಶಿಫಾರಸು ಮಾಡಿಲ್ಲ. ನಾನು ಈ ಸಾಲಿನ ಕಾರ್ಯನಿರ್ವಹಣಾ ವರದಿಯನ್ನು ಪಡೆಯುವುದು ಹೇಗೆ? ಇದಕ್ಕೆ ಸೂಕ್ತ ಪರಿಹಾರ ಉಂಟೇ?

ಜಗದೀಶ್ ಚಿತ್ರದುರ್ಗ

ಕರ್ನಾಟಕ ಸರ್ಕಾರಿ ಸೇವಾ (ಕಾರ್ಯನಿರ್ವಾಹಣಾ ವರದಿಗಳು) ನಿಯಮಗಳು 2000ರ ನಿಯಮ 7 ರೀತ್ಯಾ ವರದಿ ಮಾಡುವ ಅಧಿಕಾರಿಯು ನಿಗದಿತ ಅವಧಿಯೊಳಗೆ ಸರ್ಕಾರಿ ನೌಕರನ ಕಾರ್ಯನಿರ್ವಹಣಾ ವರದಿಯನ್ನು ಪರಿಶೀಲನಾ ಪ್ರಾಧಿಕಾರಕ್ಕೆ ಮತ್ತು ಅಂಗೀಕಾರ ಪ್ರಾಧಿಕಾರಕ್ಕೆ ಸಲ್ಲಿಸದಿದ್ದಲ್ಲಿ ವಿಶೇಷ ವರದಿಯನ್ನು ಪಡೆಯಬಹುದೆಂದು ಸೂಚಿಸಲಾಗಿದೆ. ಆದುದರಿಂದ ನೀವು ಈ ನಿಯಮಾವಳಿಯಂತೆ ವಿಶೇಷ ವರದಿಯನ್ನು ಪಡೆದು ಇಲಾಖಾ ಪದೋನ್ನತಿ ಸಮಿತಿಗೆ ಕಳುಹಿಸಲು ವಿನಂತಿಸಬಹುದು.

(ಹೆಚ್ಚಿನ ವಿವರಗಳಿಗೆ ಶ್ರೀ ಲ.ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ನೋಡಬಹುದು. ಪ್ರತಿಗಳಿಗೆ ಸಂರ್ಪಸಿ 9481244434)



*******>>
ಕಳೆದ ವರ್ಷ ಡಿಸೆಂಬರ್​ನಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದೇನೆ. ಇತ್ತೀಚೆಗೆ ನನ್ನ ಪತ್ನಿ ಅನಾರೋಗ್ಯ ಪೀಡಿತಳಾಗಿದ್ದು, ಆಕೆಗೆ ಚಿಕಿತ್ಸೆ ಕೊಡಿಸಲು ಪಿಂಚಣಿ ಹಣ ಸಾಲದಂತಾಗಿದೆ. ಹೀಗಿರುವಾಗ ಸರ್ಕಾರಿ ನೌಕರರಿಗೆ ವೈದ್ಯಕೀಯ ವೆಚ್ಚದ ಮರುಪಾವತಿ ಪಡೆಯಲು ನಿಯಮಗಳಲ್ಲಿ ಅವಕಾಶಗಳಿವೆಯೇ?

ಐ ಬಸವಾರಾಧ್ಯ, ದಾವಣಗೆರೆ

ಕರ್ನಾಟಕ ಸರ್ಕಾರಿ ನೌಕರರ ಸರ್ಕಾರಿ ನಿವೃತ್ತಿ ವೇತನಗಳ ವೈದ್ಯಕೀಯ ಚಿಕಿತ್ಸಾ ನಿಯಮಗಳು 1969ರಂತೆ ನಿವೃತ್ತ ಸರ್ಕಾರಿ ನೌಕರರಿಗೆ ಈ ನಿಯಮಾವಳಿ ನಿಯಮ 5ರಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ನೌಕರನ ಪತ್ನಿಗೆ ಚಿಕಿತ್ಸೆ ಕೊಡಿಸಬಹುದು. ಅಲ್ಲದೆ ನಿವೃತ್ತಿ ಸರ್ಕಾರಿ ನೌಕರನು ಅಥವಾ ಅವನ ಪತ್ನಿ ಅನಾರೋಗ್ಯ ಪೀಡಿತವಾಗಿ ಆಸ್ಪತ್ರೆಗೆ ಸೇರಿದರೆ ವಾರ್ಡ್ ವೆಚ್ಚ ಇತ್ಯಾದಿಗಳನ್ನು ವಿನಾಯಿತಿ ನೀಡಲು ಸೂಚಿಸಿದೆ. ಆದ್ದರಿಂದ ನೀವು ಈ ನಿಯಮಾವಳಿಯಂತೆ ನಿವೃತ್ತ ಸರ್ಕಾರಿ ನೌಕರನಿಗೆ ದೊರಕುವ ಎಲ್ಲ ಸೌಲಭ್ಯಗಳನ್ನು ಪಡೆಯಬಹುದು.

(ಹೆಚ್ಚಿನ ವಿವರಗಳಿಗೆ ಲ.ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ನೌಕರರ(ವೈದ್ಯಕೀಯ ಚಿಕಿತ್ಸಾ) ಕಾನೂನು ಕೈಪಿಡಿ ನೋಡಬಹುದು. ಪ್ರತಿಗಳಿಗೆ ಸಂರ್ಪಸಿ 9481244434)



******>> 30/7/2016ನಾನು ಸರ್ಕಾರಿ ನೌಕರನಾಗಿದ್ದು, ಇತ್ತೀಚೆಗೆ ನನಗೆ ಲಕ್ವ ಹೊಡೆದಿರುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸೇವೆ ಸಲ್ಲಿಸಲು ಅಶಕ್ತನಾಗಿದ್ದೇನೆ. ನಾನು 1995ರಲ್ಲಿ ಸರ್ಕಾರಿ ಸೇವೆಗೆ ಸೇರಿದ್ದು ನನಗೀಗ 52 ವರ್ಷ ವಯಸ್ಸು. ಈ ಹಿನ್ನಲೆಯಲ್ಲಿ ನಾನು ಅಶಕ್ತತಾ ವೇತನ ಪಡೆಯಲು ಅರ್ಹನೇ?

-ಐ ಕೃಷ್ಣ ಪೂಜಾರಿ ಉಡುಪಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 273 ರಿಂದ 282ರವರೆಗಿನ ಅವಕಾಶಗಳಂತೆ ಸರ್ಕಾರಿ ನೌಕರ ಅವನ ದೈಹಿಕ ಮತ್ತು ಮಾನಸಿಕ ಕಾರಣಗಳಿಂದಾಗಿ ಯಾವುದೇ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡಲು ಅಶಕ್ತನಾದರೆ, ಸೂಕ್ತ ವೈದ್ಯಕೀಯ ಪ್ರಾಧಿಕಾರದಿಂದ ಪ್ರಮಾಣಪತ್ರವನ್ನು ಹಾಜರುಪಡಿಸಿದರೆ ಮತ್ತು ಕನಿಷ್ಠ ಹತ್ತು ವರ್ಷಗಳ ಅರ್ಹತಾ ಸೇವೆಯನ್ನು ಸಲ್ಲಿಸಿದ್ದರೆ ಅಶಕ್ತತಾ ನಿವೃತ್ತಿ ವೇತನದ ಮೇಲೆ ಸೇವೆಯಿಂದ ನಿವೃತ್ತಿ ಹೊಂದಬಹುದು. ನಿವೃತ್ತಿ ವೇತನ ಮಂಜೂರು ಮಾಡಲು ಸಕ್ಷಮನಾದ ಪ್ರಾಧಿಕಾರಿ, ಅಶಕ್ತತಾ ನಿವೃತ್ತಿವೇತನ ಮಂಜೂರು ಮಾಡಬಹುದು. ಅಶಕ್ತತಾ ನಿವೃತ್ತಿ ವೇತನ ಮತ್ತು ನಿವೃತ್ತಿ ಉಪದಾನ ಅರ್ಹತಾದಾಯಕ ಸೇವಾವಧಿ ಮತ್ತು ಅಂತಿಮ ಉಪಲಬ್ಧಿಗಳನ್ನು ಅನುಸರಿಸಿ, ವಯೋನಿವೃತ್ತಿ ವೇತನಕ್ಕೆ ಸಮಾನವಾಗುತ್ತದೆ.

(ಹೆಚ್ಚಿನ ವಿವರಗಳಿಗೆ ಲ.ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಬಹುದು. ಪ್ರತಿಗಳಿಗೆ: 9481244434ನ್ನು ಸಂರ್ಪಸಬಹುದು).
*********>
2-7-16.
ಸರ್ಕಾರಿ ನೌಕರನಾಗಿರುವ ನನಗೆ ದಿನ ಪತ್ರಿಕೆ, ವಾರಪತ್ರಿಕೆಗಳಿಗೆ ಪತ್ರ ಬರೆಯಲು ಶಿಸ್ತು ಪ್ರಾಧಿಕಾರಿಯ ಅನುಮತಿ ಅವಶ್ಯಕವೇ?

ಕರ್ನಾಟಕ ಸಿವಿಲ್ ಸೇವಾ(ನಡತೆ ) ನಿಯಮಾವಳಿ 1966ರ ನಿಯಮ 9(2)ರ ಪ್ರಕಾರ ಅನುಮತಿ ಅವಶ್ಯಕ. ನೀವು ಬರೆಯುವ ಪತ್ರವನ್ನು, ನಿಮ್ಮ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ ಅನುಮತಿ ಪಡೆದು ಬರೆಯಬೇಕು. ಇಲ್ಲದಿದ್ದರೆ ನೀವು ಶಿಸ್ತು ಕ್ರಮಕ್ಕೆ ಒಳಗಾಗುತ್ತೀರಿ.
***

29/7/2016

ನಾನು ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿದ್ದು, ತಂದೆ ಅನಾರೋಗ್ಯದ ನಿಮಿತ್ತ 8 ತಿಂಗಳು ಕರ್ತವ್ಯಕ್ಕೆ ಗೈರಾಗಿದ್ದೇನೆ. ಏತನ್ಮಧ್ಯೆ ಇಲಾಖೆಯಿಂದ ನನ್ನನ್ನು ಡಿಚಾರ್ಜ್ ಮಾಡಿದ್ದಾರೆ. ತಂದೆ ನಿಧನರಾಗಿದ್ದು, ಅವರು ಆರೋಗ್ಯ ಇಲಾಖೆಯಲ್ಲಿ ನೌಕರರಾಗಿದ್ದರು. ಅನುಕಂಪದ ಮೇರೆಗೆ ತಂದೆಯವರ ನೌಕರಿ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?

ಐ ಬಸವರಾಜ್, ಮೈಸೂರು

ಕರ್ನಾಟಕ ಸಿವಿಲ್ ಸೇವೆ(ಪ್ರೊಬೆಷನ್ ನಿಯಮಾವಳಿ ನಿಯಮ 2(1)ರ ಪ್ರಕಾರ ಪ್ರೊಬೆಷನ್ ಮೇರೆಗೆ ನೇಮಿಸಲಾದ ಎಂದರೆ ಪರೀಕ್ಷಾರ್ಥವಾಗಿ ನೇಮಿಸಿದ್ದು ಎಂದರ್ಥ. ನೇಮಕವಾದ ಹುದ್ದೆಗೆ ಸೂಕ್ತವೋ ಅಥವಾ ಅಲ್ಲವೋ ಎಂಬುದನ್ನು ಪರೀಕ್ಷಿಸುವುದಕ್ಕಾಗಿ ನೇಮಕವಾಗಿರುವ ವ್ಯಕ್ತಿಗೆ(ಪ್ರೊಬೇಷನರ್) ಸರದಿ ನಿಯಮ 3ರ ಪ್ರಕಾರ ವಿಶೇಷ ನಿಯಮಯದ ಹೊರತು ಕರ್ನಾಟಕ ಸರ್ಕಾರಿ ಸೇವೆಗೆ ನೇಮಕವಾಗುವ ಪ್ರತಿಯೊಬ್ಬ ನೌಕರ 2 ವರ್ಷಗಳ ಪ್ರೊಬೆಷನ್ ಅವಧಿಯಲ್ಲಿರುತ್ತಾನೆ. ಪ್ರೊಬೆಷನ್ ಅವಧಿಯಲ್ಲಿ ನೌಕರ ಅನಧಿಕೃತವಾಗಿ ಗೈರು ಹಾಜರಾದರೆ ಅಥವಾ ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದದಿದ್ದರೆ ತನ್ನ ಹುದ್ದೆಯನ್ನು ಹೊಂದುವುದಕ್ಕೆ ಸೂಕ್ತವಲ್ಲವೆಂದು ನಿರ್ಧಾರಕ್ಕೆ ನೇಮಕಾತಿ ಪ್ರಧಿಕಾರ ಬಂದಲ್ಲಿ ಅವನನ್ನು ಸಿಸಿಎ ನಿಯಮಾವಳಿಯಲ್ಲಿ ಕ್ರಮ ಕೈಗೊಳ್ಳದೆ ಪ್ರೊಬೆಷನ್ ಅವಧಿಯ ಯಾವುದೇ ಹಂತದಲ್ಲಿ ಸೇವೆಯಿಂದ ಬಿಡುಗಡೆ ಮಾಡಬಹುದು. ಆದರೆ ಈ ರೀತಿ ಸೇವೆಯಿಂದ ತೆಗೆದುಹಾಕಲ್ಪಟ್ಟ ಸರ್ಕಾರಿ ನೌಕರನು ಕರ್ನಾಟಕ ಸಿವಿಲ್ ಸೇವೆ(ಅನುಕಂಪದ ಮೇರೆಗೆ) ನೇಮಕ ನಿಯಮಗಳು 1996ರ ಮೇರೆಗೆ ನೌಕರಿ ಪಡೆಯಲು ಅರ್ಹ. ಆದಕಾರಣ ನಿಮ್ಮ ತಂದೆಯವರ ನೌಕರಿಯನ್ನು ಈ ನಿಯಮಾವಳಿ ರೀತ್ಯ ಪಡೆಯಬಹುದು.

(ಹೆಚ್ಚಿನ ವಿವರಗಳಿಗೆ ಲ.ರಾಘವೇಂದ್ರರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಹಾಗೂ ಎಂ. ಉಮೇಶ್​ರ ಶಿಸ್ತು ಅಪೀಲು ಪ್ರಾಧಿಕಾರಗಳ ಕೈಪಿಡಿ ನೋಡಬಹುದು. ಪ್ರತಿಗಳಿಗೆ ಸಂರ್ಪಸಿ: 9481244434)
3-7-16.
ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ 1988ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ

ನನ್ನ ಸಹೋದ್ಯೋಗಿಯೊಬ್ಬರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವಾಗ ಲೋಕಾಯುಕ್ತ ಟ್ರಾ್ಯಪ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ತದನಂತರ ನೇರ ನೇಮಕಾತಿ ಮೂಲಕ ವಿಶ್ವವಿದ್ಯಾನಿಲಯವೊಂದರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತನ್ನ ವಿದ್ಯಾರ್ಹತೆ ಮತ್ತು ಅನುಭವದ ಹಿನ್ನೆಲೆಯಲ್ಲಿ ನೇಮಕವಾದರು. ಅತ್ತ ಸಿ.ಸಿ.ಎ ನಿಯಮಾವಳಿಯ ನಿಯಮ 14 (ಎ) ಅಡಿ ವಿಚಾರಣೆಯನ್ನು ಲೋಕಾಯುಕ್ತಕ್ಕೆ ವಹಿಸಲು ಲೋಕಾಯುಕ್ತರು ಸರ್ಕಾರದ ಕಾರ್ಯದರ್ಶಿಯವರಿಗೆ (ಆಹಾರ ಮತ್ತು ನಾಗರಿಕ ಸೇವೆಗಳು) ಶಿಫಾರಸ್ಸು ಮಾಡಿದ್ದಾರೆ. ಇವರ ವಿರುದ್ಧ 14 (ಎ) ಅಡಿ ಲೋಕಾಯುಕ್ತಕ್ಕೆ ವಿಚಾರಣೆಗೆ ವಹಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ಸಚಿವಾಲಯದ ಇಲಾಖೆ ಆದೇಶಿಸಬೇಕೋ? ಅಥವಾ ವಿಶ್ವವಿದ್ಯಾಲಯದ ನಿಯಂತ್ರಣ ಹೊಂದಿರುವ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಆದೇಶಿಸಬೇಕೊ ತಿಳಿಸಿ?

| ಬಿ.ಎಸ್.ರಮೇಶ್ ಕುಮಾರ್ ಕೋಲಾರ

ಎರಡೂ ಅಲ್ಲ. ಕಾರಣ ಸರ್ಕಾರಿ ಸೇವೆಯಿಂದ ಬಿಡುಗಡೆಯಾದ ಕೂಡಲೆ ಆ ನೌಕರ ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ, 1957ರ ಮೇರೆಗೆ ಇದರ ವ್ಯಾಪ್ತಿಯಿಂದ ಹೊರಗೆ ಹೋಗಿರುತ್ತಾರೆ (ಸಿಸಿಎ ನಿಯಮ). ಹೀಗಾಗಿ 14 (ಎ) ವ್ಯಾಪ್ತಿಯಲ್ಲಿ ಆ ನೌಕರ ಬರುವುದಿಲ್ಲ. ವಿಶ್ವವಿದ್ಯಾಲಯದಲ್ಲಿ ಸಲ್ಲಿಸುವ ಸೇವೆ ರಾಜ್ಯ ಸರ್ಕಾರಿ ಸೇವೆಯಲ್ಲ. ಆದ್ದರಿಂದ ಸಿಸಿಎ ನಿಯಮಾವಳಿಯ ನಿಯಮ 100 (1)ರ ಪ್ರಕಾರ ವಿಶ್ವವಿದ್ಯಾನಿಲಯದ ನೌಕರರಿಗೆ ಅನ್ವಯಿಸುವುದಿಲ್ಲ. ಆದರೆ, ಆ ವ್ಯಕ್ತಿ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ 1988ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗೆ ಒಳಗಾಗುತ್ತಾನೆ.
***

61 ಕಾಮೆಂಟ್‌ಗಳು:

  1. ನಾನು ಅನುದಾನಿತ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದು ನಮ್ಮ ಕಾಲೇಜಿನಲ್ಲಿ ಕಾರ್ಯಭಾರ ಕಡಿಮೆ ಎಂದು ಉಪ ನಿರ್ದೇಶಕರು ಸರ್ಕಾರಿ ಕಾಲೇಜಿಗೆ ನಿಯೋಜಿಸಿರುತ್ತಾರೆ. ನಾನು ೪ ವರ್ಷಗಳಿಂದ ಸರ್ಕಾರಿ ಕಾಲೇಜಿನಲ್ಲಿ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸಿರುತ್ತೇನೆ. ಒಂದು ವೇಳೆ ನಮ್ಮ ಅನುದಾನಿತ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದರೆ, ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಾಲೇಜಿನಲ್ಲಿ ಕಾಯಂಯಾಗಿ ಕೆಲಸಮಾಡಲು ಅನುಮತಿ ಪಡೆಯಲು ಅವಕಾಶ ಇದಿಯೆ? ಅದಕ್ಕೆ ಮುಂದಿನ ಕ್ರಮ ಹೇಗೆ? ತಿಳಿಸಿ.

    ಪ್ರತ್ಯುತ್ತರಅಳಿಸಿ
  2. ನಾನು RDPR ಇಲಾಖೆಯಲ್ಲಿ ಕಳೆದ 8 ವರ್ಷಗಳಿಂದ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ.2014 ರಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ಜಿಲ್ಲಾ ಪಂಚಾಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅನುಮೋದನೆ ಮಾಡಲು ಅವಕಾಶ ನೀಡಿರುತ್ತಾರೆ. ಈ ಹುದ್ದೆ ಅನುಮೋದನೆಗೆ PUC ವಿದ್ಯಾರ್ಹತೆಯನ್ನು ಪರಿಗಣಿಸಿರುತ್ತಾರೆ. ಆದರೆ ನಾನು ITI ವಿದ್ಯಾರ್ಹತೆಯನ್ನು ಹೊಂದಿರುತ್ತೇನೆ. ಈ ವಿದ್ಯಾರ್ಹತೆಯನ್ನು ಅನುಮೋದನೆಗೆ ಪರಿಗಣಿಸಲು ಸಾಧ್ಯವಿಲ್ಲವೇ ದಯಮಾಡಿ ಸಲಹೆ ಕೊಡಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಾವು ಕೂಡ ಕಂಪ್ಯೂಟರ್ ಆಪರೇಟರ್ ಸಿಡಿಪಿಓ puc ಮುಗಿದಿದೆ ನಮ್ದು ಆದ್ರೂ ಯಾಕೆ ತಾಗೊತಾಯಿಲ್ಲ

      ಅಳಿಸಿ
  3. ನಾನು ಭೂಮಾಪನ ಇಲಾಖೆಯಲ್ಲಿ ಭೂಮಾಪಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವಿವಾಹದ ನಿಮಿತ್ತ ದಿನಾಂಕ ೨೭/೦೧/೨೦೧೭ ರಿಂದ ೦೫/೦೨/೨೦೧೭ ರವರೆಗೆ ರಜೆ ಪಡೆದಿದ್ದು, ನಂತರ ಕೌಟುಂಬಿಕ ಸಮಸ್ಯೆಗಳ ಕಾರಣದಿಂದಾಗಿ ೩೧/೦೭/೨೦೧೭ ರವರೆಗೆ ಕರ್ತವ್ಯಕ್ಕೆ ಹಾಜರಾಗಲು ಮತ್ತು ಮೇಲಧಿಕಾರಿಗಳಿಗೆ ತಿಳಿಸಲು ಸಾಧ್ಯವಾಗಿರುವುದಿಲ್ಲ, ನನ್ನ ಸಹೋದ್ಯೋಗಿಯನ್ನು ವಿಚಾರಿಸಲಾಗಿ ನನ್ನನ್ನು ಸೇವೆಯಿಂದ ವಜಾ ಮಾಡಿರುವುದಾಗಿ ತಿಳಿಸಿರುತ್ತಾರೆ, ಈ ಬಗ್ಗೆ ನಾನು ಯಾವ ರೀತಿ ಮುಂದುವರಿಯಬೇಕಾಗಿ ದಯವಿಟ್ಟು ಮಾಹಿತಿ ನೀಡಿ...
    ಸೇವೆಗೆ ಸೇರಿದ ದಿನಾಂಕ ೦೫/೧೧/೨೦೧೩
    PP ಡಿಕ್ಲೇರ್‍ ಆಗಿರುವುದಿಲ್ಲ, ಮತ್ತು ಈ ಹಿಂದೆ ೪ ತಿಂಗಳು ವೈದ್ಯಕೀಯ ರಜೆಯನ್ನು ಪಡೆದಿರುತ್ತೇನೆ

    ಪ್ರತ್ಯುತ್ತರಅಳಿಸಿ
  4. ಸೆಲ್ಪ ಅಟೆಸ್ಟ ಮಾಡಿ ಕೊಳ್ಳಲು ಸಕಾ೯ರಿ ಆದೇಶವಿದ್ದರೆ ಕಳಿಸಿ

    ಪ್ರತ್ಯುತ್ತರಅಳಿಸಿ
  5. ಉಮೇಶ್ ಮೈಸೂರು
    ನಾನು 11 ತಿಂಗಳು ರೈಲ್ವೆ ಇಲಾಖೆಯಲ್ಲಿ ಡಿ ಗ್ರೂಪ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದು, kpsc ನೆಡಿಸಿದ್ದ sda ಉತ್ತೀಣ೯ನಾಗಿದ್ದು, ಎಲ್ಲಾ ಹಂತದ ದಾಖಲೆಗಳ ತಪಾಸಣೆ ಮುಗಿದಿದ್ದು, 1 ತಿಂಗಳಿನೊಳಗೆ ordercopy ಕೊಡಲ್ಲಿದ್ದು ಅದಕ್ಕಾಗಿ ನಾನು ರೈಲ್ವೇ ಇಲಾಖೆಗೆ ರಾಜಿನಾಮೆ ಕೊಡುವುದು ಸೂಕ್ತವೆ? Or relieve ಆಗುವುದು ಸೂಕ್ತವೇ, ಹಾಗೆಯೇ nps continue ಆಗುತ್ತ, ದಯವಿಟ್ಟು ತಿಳಿಸಿ,

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ತಡವಾಗಿ ನಿಮ್ಮ ಸಂದೇಶ ನೋಡಿದೆ... ಬಹುಶಃ ಇಷ್ಟೊತ್ತಿಗೆ ನಿಮಗೆ ಆದೇಶ ತಲುಪಿ ನಿಮ್ಮ ನಿರ್ಧಾರ ತೆಗೆದುಕೊಂಡಿರುವಿರಿ ಅನಿಸುತ್ತದೆ.

      ಅಳಿಸಿ
  6. ಗ್ರೂಪ್ ‍ಡಿ ‌ಜವಾನ ‌ಹುದ್ದೆಯಲ್ಲಿರುವವರು ‌ಹಿರಿಯ ‌ಅದಿಕಾರಿಯವರ ‌ಮನೆಕೆಲಸ ‌ಕಸ ‌ಗುಡಿಸುವುದು ‌ಬಂಡೆ ‌ತೊಳೆಯುವುದು ‌ಸರಿಯೆ?

    ಪ್ರತ್ಯುತ್ತರಅಳಿಸಿ
  7. ನಾನು ಸ್ವಇಚ್ಛೆಯಿಂದ ಅರೋಗ್ಯ ತಪಾಸಣೆ ಮಾಡಿಸಿರುತ್ತೇನೆ ಈ ವೆಚ್ಚವನ್ನು ಭರಿಸಲು ಕೋರಿದ್ದು ಮೇಲಾಧಿಕಾರಿಗಳುಸ್ವಇಚ್ಛೆಯಿಂದ ಅರೋಗ್ಯ ತಪಾಸಣೆ ಮಾಡಿಸಿರುವ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ ಎಂದು ತಿಳಿಸಿರುತ್ತಾರೆ ವೈದ್ಯಕೀಯ ನಿಯಮದಡಿ ಸಾಧ್ಯವಿಲ್ಲವೇ ದಯವಿಟ್ಟು ತಿಳಿಸಿ

    ಪ್ರತ್ಯುತ್ತರಅಳಿಸಿ
  8. ಅನುದಾನದ ಸಂಸ್ಥಯಲ್ಲಿ13ವಷ೯ಗಳಕಾಲ ಅನುದಾನಸಹಿತವಾಗಿ ಕತ೯ವ್ಯ ನಿವ೯ಹಿಸುತಿದ್ದೇನೆ ಅರಂಬದಲ್ಲಿ ನಾನು ,out off university corspondence Bed ಮಾಡಿದನ್ನು ಕೇಳಿರಲಿಲ್ಲಾ ಮುಂದೆ ಎನಾದರೂ ಕೇಳಿ ನನ್ನ ವ್ಖತ್ತಿಜೀವನಕ್ಕೆ ತೂಂದರೆ ಮಾಡಬಹುದಾ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಾನು ಗ್ರಾಮಲೆಕ್ಕಾದಿಕಾರಿ ಅಂತಾ ದಿನಾಂಕ ೦೭-೯-೨೦೦೦ರಂದು ಅನುಕಂಪ ಆದಾರದ ಮೇಲೆ ನೇಮಕ ಆಗಿದೇನೆ ನಮ್ಮ ಇಲಾಖೆ ಪರೀಕ್ಷೆ ಗಳು ದಿನಾಂಕ ಅಕೌಂಟ್ಸ ಲೋಯರ್ ೧೯೯೯.ರೇವೇನ್ಯೂ ಹೌಯರ ಹಾಗೂ ರೇವೇನ್ಯೂ ಲೋಯರ್ ೨೦೧೩ ರಲ್ಲಿ ಪಾಸಾಗಿದೇನೆ.ಅಕೌಂಟ್ಸ ಹೌಯರ ೨೦೧೪. ಜನರಲ್ಲ ಭಾಗ ೧ ಭಾಗ ೨ ೨೦೦೩ ಪಾಸಾಗಿದೇನೆ ನನ್ನ ಪರೀಕ್ಷಾರ್ಥ ಅವದಿಯ ಇನ್ನೂ ಘೂಷಣೆ ಆಗಿಲ್ಲಾ .ನನ್ನ ಪರೀಕ್ಷೆರ್ಥ ಅವದಿ ಘೂಷಣೆ ಮಾಡಲು ದಿನಾಂಕ ೨೦೧೫ ಅರ್ಜಿ ಸಲ್ಲಿಸಿದರು ಈವರೆಗೆ ಆಗಲ್ಲ ಜಾಗೂ ಬಂಡ್ತಿ ಪಡೆಯಲು ಎಲ್ಲಾ ಇಲಾಖೆ ಪರೀಕ್ಷೆಗಳನು ಆಗಿದೇನೆ ನನಗೆ ಬಂಡ್ತಿ ಕೂಡ ಬಹುದೆ

      ಅಳಿಸಿ
  9. ನಾನು ಮತ್ತು ನನ್ನ ಸಹೋದ್ಯೋಗಿಯೊಬ್ಬರು ಒಂದೇ ದಿನಾಂಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿರುತ್ತೇವೆ. ಅವರು ವಯಸ್ಸಿನಲ್ಲಿ ನನಗಿಂತಲೂ ಎರಡು ವರ್ಷ ಚಿಕ್ಕವರು ನಾನು 9 ತಿಂಗಳು ವೇತನ ರಹಿತ ರಜೆ ಹೋಗಿ ಬಿ.ಎಡ್ ತರಬೇತಿ ಪಡೆದಿರುತ್ತೇನೆ. ಭಡ್ತಿ ನೀಡುವಾಗ ನನ್ನ ಸೇವೆ ಪರಿಗಣಿಸದೇ ನನಗಿಂತಲೂ ಮೊದಲು ಅವರ ಹೆಸರು ಬಂದಿರುತ್ತದೆ. ಇದು ಸರಿಯೇ? ಇದರ ಕುರಿತು ಮಾಹಿತಿ ನೀಡಿ.
    ಶ್ರೀ ಎಸ್.ಬಿ. ಜೂಲಗುಡ್ಡ

    ಪ್ರತ್ಯುತ್ತರಅಳಿಸಿ
  10. ನಾನು ನನ್ನ ಹೆಂಡತಿ ಒಂದೇ ಒಕ್ಕೂಟದಲ್ಲಿ ಉದ್ಯೋಗಿಗಳಾಗಿದ್ದು ನಮ್ಮ ಒಕ್ಕೂಟದ ಇನ್ನೊಂದು ಬ್ರಾಂಚ್ ಗೆ ನನ್ನ ಹೆಂಡತಿಯನ್ನು ವರ್ಗಾವಣೆ ಮಾಡಿರುತ್ತಾರೆ ಇದರಿಂದ ನಮ್ಮ ಮಗುವಿನ ಲಾಲನೆ ಪಾಲನೆಗೆ ತೊಂದರೆ ಆಗುತ್ತಿದ್ದು ಇದಕ್ಕೆ ಕಾನೂನು ಪ್ರಕಾರ ಸಹಾಯ ಪಡೆಯಬಹುದಾ?

    ಪ್ರತ್ಯುತ್ತರಅಳಿಸಿ
  11. ಸರ್ಕಾರಿ ಸ್ವಾ ನಿಯಮಾವಳಿ ಪ್ರಕಾರ ನಿಯಮ 16 ರನ್ವಯ ಅನಾರೋಗ್ಯ ಇತ್ಯಾದಿ ಸಮಸ್ಯೆಗಳಿಂದ ಖಾಯಂ/ತಾತ್ಕಾಲಿಕವಾಗಿ ಬೇರೊಂದು ಇಲಾಖೆಗೆ ಹುದ್ದೆ ಮರ್ಜ್ ಮಾಡಲು ಅವಕಾಶಗಳಿವೆಯೇ.? ಇದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸುತ್ತೋಲೆ 2016 ಇದ್ದರೆ ಕಳುಹಿಸಿ.
    ಶೇಖರ್, ಕಾರವಾರ

    ಪ್ರತ್ಯುತ್ತರಅಳಿಸಿ
  12. Sir ನಾನು ರಾಜ್ಯ ಸರ್ಕಾರ ನೌಕರ ನಾಗಿ 9 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು ನಾನು 3ವರ್ಷಗಳ ಹಿಂದೆ ಮಲೇಷಿಯಾ ಸಿಂಗಪುರ ಇಲ್ಲೆಗೆ ಹೋಗಿಬಂದಿರುತ್ತೇನೆ.ನಾನು ಆ ಅವಧಿಯನ್ನು ರಜೆ ಹಾಕಿ ಹೋಗಿರುತ್ತೇನೆ.ನಾನು ಯಾವುದೇ ರೀತಿಯ ಪೂರ್ವಾನುಮತಿ ಪಡೆಯದೆ ಹೋಗಿದ್ದರಿಂದ ನಂಗೆ ಮುಂದೆ ಏನಾದ್ರು ತೊಂದರೆ ಆಗುವುದಾ

    ಪ್ರತ್ಯುತ್ತರಅಳಿಸಿ
  13. ಸರ್ ನಾನು FDA(ಪ್ರೊಬೆಷನರಿ) ಆಗಿ ಮೈಸೂರು ಜಿಲ್ಲೆಗೆ ನೇಮಕವಾಗಿ 1 ವರ್ಷ 8 ತಿಂಗಳು ಆಗಿವೆ, ಈಗ ಅಂದರೆ ಅಕ್ಟೋಬರ್-18 ಮಾಹೆಯಲ್ಲಿ ನನಗೆ ತುಮಕೂರು ಜಿಲ್ಲೆಗೆ ವರ್ಗಾವಣೆ ಯಾಗಿದೆ(ವರ್ಗಾವಣೆ ಆದೇಶದಲ್ಲಿ ಸಾರ್ವಜನಿಕರ ಹಿತದೃಷ್ಟಿ ಯಿಂದ ಸಾರ್ವತ್ರಿಕ ವರ್ಗಾವಣೆ ಎಂದು ಇದೆ) ... ಹಾಗದರೆ relive ಆದ ನಂತರ ನಾನು ವರದಿ ಮಾಡಿಕೊಳ್ಳಲು 10 ದಿನಗಳ joining leave ಪಡೆಯಬಹುದೆ...ಮಾಹಿತಿ ನೀಡಲು ಕೊರಿದೆ.

    ಪ್ರತ್ಯುತ್ತರಅಳಿಸಿ
  14. ಸರ್ ನನ್ನ ಹೆಸರು ಮೋಹನಕುಮಾರ್. ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರ 24x7 ನಮಗೆ ವೀಕ್ಲಿ ಆಫ್ ಮತ್ತು cL ತೆಗೆದುಕೊಳ್ಳಲು ತುಂಬಾ ಪ್ರಾಬ್ಲಮ್ ಆಗ್ತಾ ಇದೆ. ಏಕೆಂದರೆ ನಾವು 3 ಜನ ಗ್ರೂಪ್ ಡಿ ಇದಿವಿ. ಒಬ್ಬ ರೆಗ್ಯುಲರ್ ಇನ್ನ ಎರಡು ಜನ ಔಟ್ ಸೊರ್ಸ್. ಒಬ್ಬ ರಜೆ ಆಕಿದ್ರೆ ಅಥವಾ ವೀಕ್ಲಿ ಆಫ್ ತೆಗೆದು ಕೊಂಡರೆ ಇನ್ನು ಉಳಿದ ಎರಡು ಜನ 12 ಗಂಟೆ ಒಬ್ಬ ಮತ್ತೊಬ್ಬ 12 ಗಂಟೆ ಡ್ಯೂಟಿ ಮಾಡಿದ್ರೆ ಮಾತ್ರ ಒಬ್ರು ರಜೆ ತೆಗೆದು ಕೊಳ್ಳ ಬಹುದು. ನಮಗೆ 12 ಗಂಟೆ ಡ್ಯೂಟಿ ಮಾಡಿ ರಜೆ ತೆಗೆದುಕೊಳ್ಳಲು ಆಗತ್ತಾ ಇಲ್ಲಾ ಆದ್ರಿಂದ ನಾವು ರಜೆನೆ ತೆಗೆದುಕೊಳ್ಳುತ್ತಿಲ್ಲ ಆದುದರಿಂದ ದಯಮಾಡಿ ನಾವು 24x7 phc ಅಲ್ಲಿ ಹೇಗೆ ರಜೆ ತೆಗೆದು ಕೊಳ್ಳಬಹುದು ಹೇಳಿ ಸರ್ ಪ್ಲೀಸ್ ಪ್ಲೀಸ್ ಸರ್. ನಾನು 5 ವರ್ಷ ದಿಂದ ವೀಕ್ಲಿ ಆಫ್ ತೆಗೆದುಕೊಂಡಿಲ್ಲ ನನಗೆ ಇದ್ರಿಂದ ತುಂಬಾ ಸಮಸ್ಯೆ ಆಗಿದೆ ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ

    ಪ್ರತ್ಯುತ್ತರಅಳಿಸಿ
  15. ಸುರೇಶ ದೈಹಿಕ ಶಿಕ್ಷಕ ವಾಡಿ
    ಶಾಲಾನುದಾನ 2012ಕ್ಕೆ ಒಳಪಟ್ಟಿದ್ದು. ಮಂಡಳಿಯವರು
    2015ರಿಂದ2019 ವಾರ್ಷಿಕ ಬಡ್ತಿಯನ್ನು ಹಾಗು 5 ತಿಂಗಳ ವೇತನವನ್ನು ಯಾವು ಮುನ್ಸೂಚನೆ ನೀಡದೆ ತಡೆಹಿಡಿದಾರೆ ಈ ವಿಷಯ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದರು ಫ್ರಯೋಜನವಿಲ್ಲ ಇದಕ್ಕೆ ಸಲಹೆ ಕೊಡಿ ಸರ್

    ಪ್ರತ್ಯುತ್ತರಅಳಿಸಿ
  16. ಸರ್ ನನಗೆ 44 ವರ್ಷ ಆಗಿದ್ದು 3ಬಿ ಸೇರಿದ್ದು ಅನುದಾನಿತ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿ ಆಯ್ಕೆ ಆಗಬಹುದಾ ತಿಳಿಸಿ ಸರ್

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಕಲಿ ದಾಖಲೆಗಳನ್ನು ನೀಡಿ ನೌಕರಿ.ಪಡೆದ ವರನ್ನು ಹೇಗೆ ಕಂಡು ಹಿಡಿಯಾವುದು

      ಅಳಿಸಿ
    2. ನಾನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಗ್ರುಪ್ ಡಿ ಹುದ್ದೆಯಲ್ಲಿ ಖಾಯಂ ಸಿಬ್ಬಂದಿಯಾಗಿ 3 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಹಾಗೂ ನಾನು ಅರಣ್ಯ ಇಲಾಖೆಗೆ ಅಥವಾ ಬೇರೆ ಯಾವುದೆ ಇಲಾಖೆಯ ಗ್ರುಪ್ ಡಿ ಹುದ್ದೆಗೆ ಹೋಗಲು ಬಯಸುತ್ತೆನೆ.ಹೀಗೆ ಬೇರೆ ಇಲಾಖೆಗೆ ವರ್ಗಾವಣೆ ಆಗಲು ನಾನು ಏನು ಮಾಡಬೇಕೆಂದು ದಯವಿಟ್ಟು ತಿಳಿಸಿ.

      ಅಳಿಸಿ
  17. ನಾನು ಕಂದಾಯ ಇಲಾಖೆಯಲ್ಲಿ "ಡಿ" ದರ್ಜೆ ಸಿಪಾಯಿ ನೌಕರರಾಗಿದ್ದು, 2016 ರಲ್ಲಿ ಸ್ಥಳೀಯ ವ್ರಂದದಲ್ಲಿ ಆಯ್ಕೆಯಾಗಿರುತ್ತೆನೆ. ಅದರಂತೆ ನಾನು ಪದವಿಧರರಾಗಿದ್ದು ಮುಂಬಡ್ತಿ ಹೊಂದಲು ಸಾಧ್ಯವೇ?? ಮುಂಬಡ್ತಿ ಹೊಂದಲು ಇರುವ ನಿಯಮಗಳನ್ನು ತಿಳಿಸಿ.

    ಪ್ರತ್ಯುತ್ತರಅಳಿಸಿ
  18. ಸರ್ ನಾನು ಶಿಕ್ಷಕಿಯಾಗಿ180ದಿನಗಳ ಮಾತ್ರೃತ್ವರಜೆಯನ್ನು ಪಡೆದು ಶಾಲೆ ಕೆಲಸಕ್ಕೆ ಹಾಜರಾಗಿದ್ದೇನೆ.ಮಗುವಿಗಾಗಿ ನಾನು ಶಾಲೆಯಿಂದ ಮನೆಗೆ ಬೇಗ ಹೋಗಬಹುದೇ??? KCSR ನಿಯಮದಲ್ಲಿ ಅವಕಾಶ ಇದೆಯೋ ಅಥವಾ ಇಲ್ಲವೋ ತಿಳಿಸಿರಿ

    ಪ್ರತ್ಯುತ್ತರಅಳಿಸಿ
  19. ಸರ್ ನಾನು ಶಿಕ್ಷಕಿಯಾಗಿ180ದಿನಗಳ ಮಾತ್ರೃತ್ವರಜೆಯನ್ನು ಪಡೆದು ಶಾಲೆ ಕೆಲಸಕ್ಕೆ ಹಾಜರಾಗಿದ್ದೇನೆ.ಮಗುವಿಗಾಗಿ ನಾನು ಶಾಲೆಯಿಂದ ಮನೆಗೆ ಬೇಗ ಹೋಗಬಹುದೇ??? KCSR ನಿಯಮದಲ್ಲಿ ಅವಕಾಶ ಇದೆಯೋ ಅಥವಾ ಇಲ್ಲವೋ ತಿಳಿಸಿರಿ

    ಪ್ರತ್ಯುತ್ತರಅಳಿಸಿ
  20. 1) ಕರ್ನಾಟಕ ನಾಗರಿಕ ಸೇವಾ( ಸೇವೆ ಮತ್ತು ಕನ್ನಡ ಭಾಷಾ ಪರೀಕ್ಷೆ ಗಳು) ನಿಯಮಗಳು 1974ರ ಅನ್ವಯ ಸದರಿ ಅಭ್ಯರ್ಥಿಯ ಪದ ನಾಮಕ್ಕೆ ಎಸ್. ಎ. ಎಸ್. ವಿಷಯವನ್ನು ನಿಗದಿಪಡಿಸಲಾಗಿದೇಯೇ? ( ಹೌದು/ ಇಲ್ಲ)
    2)1974 ನಿಯಮದಲ್ಲಿ ಅಳವಡಿಸದಿದ್ದರೂ ಅವರ ಪದ ನಾಮಕ್ಕೆ ಅಥವಾ ಮುಂಬಡ್ತಿಗೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಎಸ್ ಎ ಎಸ್ ವಿಷಯವನ್ನು ನಿಗದಿಪಡಿಸಲಾಗಿದೆಯೇ? ಹೌದಾಗಿದ್ದಲ್ಲಿ ಸಂಬಂಧಪಟ್ಟ ಹುದ್ದೆಗೆ ನಿಗದಿಪಡಿಸಿದ ವೃಂದ ಮತ್ತು ನೇಮಕಾತಿ ನಿಯಮಗಳು ಪ್ರತಿಯನ್ನು ತಪ್ಪದೇ ಅಪ್ಲೋಡ್ ಮಾಡಬೇಕು.,( ಹೌದು/ ಇಲ್ಲ) ಉತ್ತರವನ್ನು ನೀಡಿ ಯಾವ ಪ್ರತಿಯನ್ನು ಡೌನ್ಲೋಡ್ ಮಾಡಬೇಕು ತಿಳಿಸಿ

    ಪ್ರತ್ಯುತ್ತರಅಳಿಸಿ
  21. ನಾನು ಶಿಕ್ಷಣ ಇಲಾಖೆ ಪ್ರಥಮ ದರ್ಜೆ ಸಹಾಯಕ 6 ವರ್ಷ ಪೂರ್ಣಗೊಂಡಿದೆ

    ಪ್ರತ್ಯುತ್ತರಅಳಿಸಿ
  22. ಸಾರ್ ನಾನು 2005ರಲ್ಲಿ ಸರ್ಕಾರಿ ಸೇವೆಗೆ ಸೇರಿ ನಂತರ 2013ರಲ್ಲಿ ಇಲಾಖಾ ಅನುಮತಿ ಪಡೆದು ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗೆ ಸೇರಿದ್ದೇನೆ.ನಂತರ 2014ರಲ್ಲಿ ಹಿಂದಿನ ಸೇವೆಯನ್ನು ಪರಿಗಣಿಸಲು ನೇಮಕಾತಿ ಪ್ರಾದಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು ಇದು ವರೆಗೂ ಪರಿಗಣಿಸದೇ ಪದೇ ಪದೇ ವಾಪಾಸು ಕಳಿಸುತ್ತಿದ್ದಾರೆ.ಈಗ ನಾನು ಏನು ಮಾಡಬೇಕು ಎಂಬುದನ್ನು ತಿಳಿಸಿ...ಸಾರ್..

    ಪ್ರತ್ಯುತ್ತರಅಳಿಸಿ
  23. ಸರ್ ನಮಸ್ಕಾರ ಪ್ರೊಬೇಷನರಿ ಅವಧಿಯಲ್ಲಿ ಇದ್ದನಿ ನನ್ನಗೆ 21day ಮತ್ತು ಅರ್ಧ ವೇತನ ಸಂಬಳ ಬರುವುದು ಇಲ್ಲವಾ ಸಾರ್ ತಿಳಿಸಿಕೊಡಿ

    ಪ್ರತ್ಯುತ್ತರಅಳಿಸಿ
  24. ನಾನು kpsc ಯ ಮೂಲಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರವಸೂಲಿಗಾರ(Bill collector) ಹುದ್ದೆಗೆ ಹಾಗೂ Agricultural Marketing department ನಲ್ಲಿ Marketing Assistant ಈ ಎರಡೂ ಹುದ್ದೆಗಳಿಗೆ ಆಯ್ಕೆಯಾಗಿರುತ್ತೆನೆ. ಈ ಎರಡರಲ್ಲಿ ಯಾವುದು ಉತ್ತಮ ಆಯ್ಕೆ ? (ನಗರ ಸ್ಥಳೀಯ ಸಂಸ್ಥೆಯು ಸ್ವಾಯತ್ತ ಸಂಸ್ಥೆ ಆಗಿದೆ, ಇಲ್ಲಿ ಪಿಂಚಣಿ,kgid,gpf,gis, ಸುಳುಹು ವಿಮೆ ಸೌಲಭ್ಯಗಳು ಅನ್ವಯಿಸುವುದಿಲ್ಲ.)

    ಪ್ರತ್ಯುತ್ತರಅಳಿಸಿ
  25. ಎಫ್ ಡಿ ಎ ಆಗಿ ನೇರವಾಗಿ (ಕೆ.ಪಿ.ಎಸ್.ಸಿ) ಮುಲಕ ಒಂದು ಇಲಾಖೆಗೆ ನೇಮಕಾತಿಯಾಗಿದ್ದು ಅದೇ ವೇತನ ಸೌಲಭ್ಯವಿರುವ ಮತ್ತೊಂದು ಇಲಾಖೆಗೆ ಮರ್ಜಾಗಲು ಸಾಧ್ಯವೇ ಸಾಧ್ಯವಿದ್ದಲ್ಲಿ ನೇಮಕಾತಿ ಹೋಂದಿದ ಎಷ್ಟು ವರ್ಷ ಗಳ ನಂತರ ಆಗಬಹುದು

    ಪ್ರತ್ಯುತ್ತರಅಳಿಸಿ
  26. ನಾನು ಕನ್ರಾಟಕ ಸರ್ಕಾರದ ಆರೋಗ್ಯ ಇಲಾಖೆಯ ಡಿ,ಗ್ರೂಪ್ ನೌಕರನಾಗಿದ್ದು..,.... ದೀರ್ಘಕಾಲ ರಜೆ ತೆಗೆದುಕೊಳ್ಳ ಬೇಕೆಂದಿರುವೆ.ಬೇರೆ ಇಲಾಖೆಗಾಗಿ ವ್ಯಾಸಂಗ ಮಾಡುವ ಆಸೆ ಇದೆ,ಆದ ಕಾರಣ ಅಭ್ಯಾಸ ಮುಗಿಸಿ ಮತ್ತೆ ಸಙರಬಹುದೆ

    ಪ್ರತ್ಯುತ್ತರಅಳಿಸಿ
  27. ಒಬ್ಬ ವ್ಯಕ್ತಿ ಸರ್ಕಾರಿ ನೌಕರನಾಗಿದ್ದು, ಮತ್ತೊಂದು ಕಡೆ ಖಾಸಗಿ ಕೆಲಸ ಮಾಡೋದು ಸರಿನೋ ಅಥವಾ ಯಾವ ಕ್ಲಾಸ್ ಅಡಿ ಅಪರಾಧ ವಾಗುತ್ತದೆ ದಯವಿಟ್ಟು ತಿಳಿಸಿ.

    ಪ್ರತ್ಯುತ್ತರಅಳಿಸಿ
  28. ಸರ ನಾನು ನೀರಾವರಿ ಇಲಾಖೆ ಯಲ್ಲಿ ಅನುಕಂಪ ಆಧಾರದ ಮೇಲೆ ಪ್ರಥಮ ದರ್ಜೆ ಸಹಾಯಕ ನೆಂದು ನೇಮಕಾತಿಹೊಂದಿದ್ದು ಪರೀಕ್ಷಾರ್ಥ ಅವಧಿ ಘೊಷನೆಗೆ ಸಂಬದಿಸಿದ ಪರಿಕ್ಷೆಯನ್ನು ಪಾಸು ಮಾಡಿದ್ದು ಪರೀಕ್ಷಾರ್ಥ ಅವಧಿ ಘೊಷನೆಗೆ ವ್ರತ್ತಿ ಬುನಾದಿ ತರಬೇತಿಯನ್ನು ಕಂಪಲಸರಿ ಮುಗಿಸಿರಬೇಕೆ ಇದರ ಬಗ್ಗೆ ಆದೇಶ ಪ್ರತಿ ಇದ್ದರೆ ಕಳುಹಿಸಿ ಪ್ಲಿಸ್ ಸರ್

    ಪ್ರತ್ಯುತ್ತರಅಳಿಸಿ
  29. ಹತ್ತು ವರ್ಷದ ಕಾಲಮಿತಿಯನ್ನು ಪೂರ್ಣಗೊಂಡ ನಂತರ ಇಲಾಖೆ ಪರೀಕ್ಷೆ ಕಡ್ಡಾಯವಾದರೆ ಅದು ನಮಗೆ ಸಿಗುತ್ತದೆ .ರಮೇಶ್ ಅಂಬಿಗೆರ ಮುಂಡಗೋಡ

    ಪ್ರತ್ಯುತ್ತರಅಳಿಸಿ
  30. ಹತ್ತು ವರ್ಷದ ಕಾಲಮಿತಿಯನ್ನು ಪೂರ್ಣಗೊಂಡ ನಂತರ
    ಆ ಒಂದು ವೇತನ ನಮಗೆ ಸಿಗಬೇಕಾದರೆ ನಿಯಮಾನುಸಾರವಾಗಿ ಇಲಾಖಾ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸ್ ಆಗಬೇಕಿವೆ. ರಮೇಶ್ ಅಂಬಿಗೇರ ಮುಂಡಗೋಡ

    ಪ್ರತ್ಯುತ್ತರಅಳಿಸಿ
  31. ನಮ್ಮ ತಂದೆಗೆ ನಾವು 4 ಜನ.ನಮ್ಮ ತಂದೆ ಕ್ಯಾನ್ಸರ್ ನಿಂದ ಸಾವನ್ನು ಅಪ್ಪಿದ್ದಾರೆ ನಮ್ಮ ತಂದೆಯ ನೌಕರಿಯನ್ನು ಅನುಕಂಪದ ಆಧಾರದ ಮೇಲೆ ನಮ್ಮ ಅಣ್ಣ ಮಾಡುತಿರುತಾನೆ.2008 ರಲ್ಲಿ ಕೆಲಸಕ್ಕೆ ಸೇರಿರುತಾನೇ ಅವನು ಮದುವೆ ಮಾಡಿಕೊಂಡಿದ್ದಾನೆ ಮತು ಅವನಿಗೆ 3 ಜನ ಹೆಣ್ಣುಮಕ್ಕಳು ಇದ್ದಾರೆ.ನಮಗೆ ಮತ್ತೆ ನಮ್ಮ ತಾಯಿಗೆ ನೋಡಿಕೊಳ್ಳುತಿಲ್ಲಾ.ಇದಕ್ಕೆ ಏನು ಪರಿಹಾರ ಇದೆ ದಯವಿಟ್ಟು ತಿಳಿಸಿ.ನಮ್ಮ ತಾಯಿಗೆ ಪೆನ್ಷನ್ ಬರುತ್ತೆ 5000 ಸಾವಿರ ಅದರಲ್ಲಿ ನಮ್ಮ ಜೀವನ ಸಾಗಿಸೋದು ಕಷ್ಟ ವಾಗುತಿದೆ.ನಾವು ಅಲ್ಲಿ ಇಲ್ಲಿ ಕೆಲಸ ಮಾಡಿ ಜೀವನ ನಡೆಸ್ತಾ ಇದೀವಿ.ನಮ್ಮ ಓದು ಸಹ ಮುಗಿದಿಲ್ಲ.

    ಪ್ರತ್ಯುತ್ತರಅಳಿಸಿ
  32. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  33. Sir ಎಂಟು ತಂಗಳಿನಿಂದ ಒಬ್ಬ ಸರಕಾರಿ ನೌಕರನ ಸಂಬಳ ತಡೆಹಿಡಿಯಲಾಗಿದೆ ಈಗೆ ಮಾಡಲು ಬರುತ್ತದೆ ಯೇ ತಿಳಿಸಿ

    ಪ್ರತ್ಯುತ್ತರಅಳಿಸಿ
  34. ಸರ್ ನನ್ನ ಹೆಸರು ಅನಾಮಧೇಯ. ವಿಜಯಪುರ. ಸರ್ ನನ್ನ ಅಣ್ಣನು ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕನಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು ಅನಾರೋಗ್ಯ ನಿಮಿತ್ತವಾಗ ದಿನಾಂಕ 23-10-2020ರಂದು ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಅವರಿಗೆ ಮದುವೆಯಾಗಿಲ್ಲ.ಮತ್ತು ಅವರು ಯಾರನ್ನೂ ದತ್ತು ಮಕ್ಕಳನ್ನು ಪಡೆದಿಲ್ಲ. ನಾನು ಅವರ ಕಿರಿಯ ಸಹೋದರ ನಾಗಿದ್ದು, ನಾನು B.A.ಪದವೀದರನಾಗಿದ್ದೇನೆ.ನನ್ನ ಅಣ್ಣನ ನೌಕರಿ ಅನುಕಂಪದ ಆಧಾರದ ಮೇಲೆ ನಾನು ಪಡೆಯಬಹುದೇ ಸರ್

    ಪ್ರತ್ಯುತ್ತರಅಳಿಸಿ
  35. ಮಾನ್ಯರೇ ನಾನು ನಿಂಗಪ್ಪ ಪಕಾಂಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನಹೋಂಡಾದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.ನನ್ನ ಹೆಂಡತಿ ಮೊದಲನೆಯ ಹೆರಿಗೆಯಲ್ಲಿ ಒಂದು ಗಂಡು ಮಗು ಹಾಗೂ ಎರಡನೇ ಹೆರಿಗೆಯಲ್ಲಿ ಅವಳಿ ಮಕ್ಕಳು ಜನಿಸಿದ್ದು. ನಾನು ಸರಕಾರದ ನಿಯಮದ ಪ್ರಕಾರ ಎರಡು ಹೆರಿಗೆ ನಂತರ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ(ಟುಬೆಕ್ಟಮಿ) ಯನ್ನು ಮಾಡಿಸಿರುತ್ತೇವೆ.ಈಗ ನನ್ನ ಪ್ರಶ್ನೆ ಏನೆಂದರೆ ಎರಡು ಹೆರಿಗೆ ನಂತರ ಒಂದು ಬಡ್ತಿ ವೇತನ ನನಗೆ ಸಿಗಬಹುದೇ??????

    ಪ್ರತ್ಯುತ್ತರಅಳಿಸಿ
  36. ಪರೀಕ್ಷಾರ್ಥ ಅವಧಿಯಲ್ಲಿ ಪತಿ ಪತ್ನಿ ಇಬ್ಬರಿಗೂ ಸರ್ಕಾರಿ ನೌಕರಿ ಇದ್ದರೆ ವರ್ಗಾವಣೆ ಹೊಂದಲು ಅವಕಾಶ ಇರುವುದೇ ದಯವಿಟ್ಟು ಸಲಹೆ ನೀಡಿ.

    ಪ್ರತ್ಯುತ್ತರಅಳಿಸಿ
  37. ನಾನು ೧೭-೦೯-೨೦೦೦ ರಂದು ಅನುಕಂಪದ ಆಧಾರ ಮೇಲೆ ಗ್ರಾಮಲೆಕ್ಕಾದಿಕಾರಿ ಕಾರ್ಯನಿರ್ವಾಣೆ ಮಾಡತಾ ಇರುತ್ತೆನೆ.ನನ್ನ ಪರೀಕ್ಷಾರ್ಥ ಅವದಿಯೂ ಬಹಳ ತಡವಾಗಿದರಿಂದಾ ಸರಕಾರ ಆದೇಶದ ಮೇರೆಗೆ ೨೩-೧೨ ೨೦೧೪ ರಂದು ನನ್ನ ಪರೀಕ್ಷಾರ್ಥ ಅವದಿಯು ವಿಸ್ತರಣೆ ಆಗಿರುತ್ತದೆ. ಇ ಆದೇಶದ‌ ಪ್ರಕಾರ ಮಾನ್ಯ ಜಿಲ್ಲಾದಿಕಾರಿಗಳು ಧಾರವಾಡ ಇವರು ನನ್ನ ಪರೀಕ್ಷರ್ಥ ಅವದಿಯನ್ನು ಘೂಷಣೆ ಮಾಡಿರುತ್ತಾರೆ. ಇಗ ನನಗೆ ೪ ವಾಷೀಕ ವೇತನ ಬಂಡ್ತಿ ಹೂರತು ಪಡೀಸಿ ಇಲ್ಲಿವೆರೆಗೆ ಯಾವ ವೇತನ ಬಂಡ್ತಿಗಳು ಹಾಗೂ ನನ್ನ ಎರಡು ದಂಡನಾ ಯಾವಾಗ ಮುಗಿತ್ತವೆ . ಆದರಿಂದಾ ಇಗ ನನಗೆ ೨೦೦೪ ರಿಂದಾ ೨೦೨೧ ವರೆಗೆ ಎಷ್ಟೋ ವೇತನ ಇರಬೇಕು ಇದರಲ್ಲಿ ೨೦೦೪ ರಿಂದಾ ೨೦೧೪ ವರಗೆ ನನಗೆ ಕಾಲ್ಪನಿಕ ನೀಡಬಹುದೆ .ಮತ್ತು ೨೦೧೪ ರಿಂದಾ ೨೦೨೧ ವರೆಗೆ ಎಷ್ಟೋ ಅರಿಯ್ಸ ಬರುತ್ತೆ .ಹಾಗೂ ನಾನು ಯಾವಾಗ ಮುಂಬಂಡ್ತಿಗೆ ಅರ್ಹತೆ ಪಡೆಯುತ್ತನೆ ದಯಮಾಡಿ ತಿಳಿಸಿ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಾನು ೧೭-೦೯-೨೦೦೦ ರಂದು ಅನುಕಂಪದ ಆಧಾರ ಮೇಲೆ ಗ್ರಾಮಲೆಕ್ಕಾದಿಕಾರಿ ಕಾರ್ಯನಿರ್ವಾಣೆ ಮಾಡತಾ ಇರುತ್ತೆನೆ.ನನ್ನ ಪರೀಕ್ಷಾರ್ಥ ಅವದಿಯೂ ಬಹಳ ತಡವಾಗಿದರಿಂದಾ ಸರಕಾರ ಆದೇಶದ ಮೇರೆಗೆ ೨೩-೧೨ ೨೦೧೪ ರಂದು ನನ್ನ ಪರೀಕ್ಷಾರ್ಥ ಅವದಿಯು ವಿಸ್ತರಣೆ ಆಗಿರುತ್ತದೆ. ಇ ಆದೇಶದ‌ ಪ್ರಕಾರ ಮಾನ್ಯ ಜಿಲ್ಲಾದಿಕಾರಿಗಳು ಧಾರವಾಡ ಇವರು ನನ್ನ ಪರೀಕ್ಷರ್ಥ ಅವದಿಯನ್ನು ಘೂಷಣೆ ಮಾಡಿರುತ್ತಾರೆ. ಇಗ ನನಗೆ ೪ ವಾಷೀಕ ವೇತನ ಬಂಡ್ತಿ ಹೂರತು ಪಡೀಸಿ ಇಲ್ಲಿವೆರೆಗೆ ಯಾವ ವೇತನ ಬಂಡ್ತಿಗಳು ಹಾಗೂ ನನ್ನ ಎರಡು ದಂಡನಾ ೨೦೦೮.ಒಂದು .ಎರಡು ೨೦೦೯ ರಲ್ಲಿ ಇದರಲ್ಲಿ ೬ ವಾಷೀಕ ವೇತನ ಬಂಡ್ತಿಗಳುನ್ನು ತಡೆಹಿಡಿಲು ಆದೇಶ ಆಗಿರುತ್ತವೆ ಯಾವಾಗ ಮುಗಿತ್ತವೆ . ಆದರಿಂದಾ ಇಗ ನನಗೆ ೨೦೦೪ ರಿಂದಾ ೨೦೨೧ ವರೆಗೆ ಎಷ್ಟೋ ವೇತನ ಇರಬೇಕು ಇದರಲ್ಲಿ ೨೦೦೪ ರಿಂದಾ ೨೦೧೪ ವರಗೆ ನನಗೆ ಕಾಲ್ಪನಿಕ ನೀಡಬಹುದೆ .ಮತ್ತು ೨೦೧೪ ರಿಂದಾ ೨೦೨೧ ವರೆಗೆ ಎಷ್ಟೋ ಅರಿಯ್ಸ ಬರುತ್ತೆ .ಹಾಗೂ ನಾನು ಯಾವಾಗ ಮುಂಬಂಡ್ತಿಗೆ ಅರ್ಹತೆ ಪಡೆಯುತ್ತನೆ ದಯಮಾಡಿ ತಿಳಿಸಿ

      ಅಳಿಸಿ
  38. ನಾನು ೧೭-೦೯-೨೦೦೦ ರಂದು ಅನುಕಂಪದ ಆಧಾರ ಮೇಲೆ ಗ್ರಾಮಲೆಕ್ಕಾದಿಕಾರಿ ಕಾರ್ಯನಿರ್ವಾಣೆ ಮಾಡತಾ ಇರುತ್ತೆನೆ.ನನ್ನ ಪರೀಕ್ಷಾರ್ಥ ಅವದಿಯೂ ಬಹಳ ತಡವಾಗಿದರಿಂದಾ ಸರಕಾರ ಆದೇಶದ ಮೇರೆಗೆ ೨೩-೧೨ ೨೦೧೪ ರಂದು ನನ್ನ ಪರೀಕ್ಷಾರ್ಥ ಅವದಿಯು ವಿಸ್ತರಣೆ ಆಗಿರುತ್ತದೆ. ಇ ಆದೇಶದ‌ ಪ್ರಕಾರ ಮಾನ್ಯ ಜಿಲ್ಲಾದಿಕಾರಿಗಳು ಧಾರವಾಡ ಇವರು ನನ್ನ ಪರೀಕ್ಷರ್ಥ ಅವದಿಯನ್ನು ಘೂಷಣೆ ಮಾಡಿರುತ್ತಾರೆ. ಇಗ ನನಗೆ ೪ ವಾಷೀಕ ವೇತನ ಬಂಡ್ತಿ ಹೂರತು ಪಡೀಸಿ ಇಲ್ಲಿವೆರೆಗೆ ಯಾವ ವೇತನ ಬಂಡ್ತಿಗಳು ಹಾಗೂ ನನ್ನ ಎರಡು ದಂಡನಾ ೨೦೦೮.ಒಂದು .ಎರಡು ೨೦೦೯ ರಲ್ಲಿ ಇದರಲ್ಲಿ ೬ ವಾಷೀಕ ವೇತನ ಬಂಡ್ತಿಗಳುನ್ನು ತಡೆಹಿಡಿಲು ಆದೇಶ ಆಗಿರುತ್ತವೆ ಯಾವಾಗ ಮುಗಿತ್ತವೆ . ಆದರಿಂದಾ ಇಗ ನನಗೆ ೨೦೦೪ ರಿಂದಾ ೨೦೨೧ ವರೆಗೆ ಎಷ್ಟೋ ವೇತನ ಇರಬೇಕು ಇದರಲ್ಲಿ ೨೦೦೪ ರಿಂದಾ ೨೦೧೪ ವರಗೆ ನನಗೆ ಕಾಲ್ಪನಿಕ ನೀಡಬಹುದೆ .ಮತ್ತು ೨೦೧೪ ರಿಂದಾ ೨೦೨೧ ವರೆಗೆ ಎಷ್ಟೋ ಅರಿಯ್ಸ ಬರುತ್ತೆ .ಹಾಗೂ ನಾನು ಯಾವಾಗ ಮುಂಬಂಡ್ತಿಗೆ ಅರ್ಹತೆ ಪಡೆಯುತ್ತನೆ ದಯಮಾಡಿ ತಿಳಿಸಿ

    ಪ್ರತ್ಯುತ್ತರಅಳಿಸಿ
  39. ಸರ ನನಗೆ ೨೦೦೪ ರಿಂದಾ ೨೦೦೯ ವರೆಗೆ ವೇತವ ಬಂಡ್ತಿಗಳು ಸಿಕ್ಕಿಲ ಹಾಗೂ

    ಪ್ರತ್ಯುತ್ತರಅಳಿಸಿ
  40. ನಾನು 3 ವರ್ಷದ ಹಿಂದೆ ಸಮಾಜಕಲ್ಯಾಣ ಇಲಾಖೆಯಲ್ಲಿ ಅಡುಗೆ ಸಹಾಯಕನಾಗಿ nemakagodiddene ಆದರೆ ಅದಕ್ಕಿಂತಲೂ ಮೊದಲೇ kreis ಕರೆದ fda ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ.ಈಗ fda ಹುದ್ದೆಗೆ ಆಯ್ಕೆಯಾಗಿದ್ದು ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ.ಹಿಂದಿನ 3 ವರ್ಷಗಳ ಸೇವಾ ಅವಧಿ ಪರಿಗೈಸುತ್ತರೆಯೋ ಇಲ್ಲವೋ

    ಪ್ರತ್ಯುತ್ತರಅಳಿಸಿ
  41. ನಾನು ಸರಕಾರಿ ಪ್ರೌಢ ಶಾಲಾ ಶಿಕ್ಷಕ. ನನಗೆ ಒಂದು ವರ್ಷದಲ್ಲಿ ಎರಡು ಪರಿಮಿತ ರಜೆಯ ( R.H.) ಸೌಲಭ್ಯವನ್ನು ಪಡೆಯಲು ಅವಕಾಶವಿದೆ. ಅವಕಾಶವಿದ್ದಲ್ಲಿ ಈ ಎರಡೂ ರಜೆಗಳನ್ನು ನಾನು ಒಮ್ಮೆಗೆ ಬಳಸಿಕೊಳ್ಳಬಹುದೆ ಎಂಬುದನ್ನು ದಯವಿಟ್ತು ತಿಳಿಸಿ.

    ಪ್ರತ್ಯುತ್ತರಅಳಿಸಿ
  42. ನಮಸ್ತೇ ಸರ್, ನನ್ನ ಪತಿಯವರು ಪ್ರೌಢ ಶಾಲಾ ಶಿಕ್ಷಕರು ಆಗಿದ್ದರು 2005 ರಲ್ಲಿ ನಿಧನ ಹೊಂದಿದ ಕಾರಣ ನನಗೆ ಅನುಕಂಪದ ಆಧಾರದ ಮೇಲೆ 2008 ರಲ್ಲಿ ನೇಮಕಾತಿ ಹೊಂದಿರುತ್ತೇನೆ. 2008 ರಿಂದ ಕಚೇರಿಯಲ್ಲಿ ಯಾವುದೇ ಕೆಲಸಗಳನ್ನು ವಹಿಸಿದರು ನಿಷ್ಠೆಯಿಂದ ನಿರ್ವಹಿಸಿಕೊಂಡು ಬಂದಿರುತ್ತೇನೆ. ಆದರೆ 2016-17 ರಿಂದ ನನಗೆ ಕಚೇರಿಯಲ್ಲಿ ಕಿರುಕುಳಗಳು ಪ್ರಾರಂಭವಾಗಿರುತ್ತವೆ. ಮೇಲಿಂದ ಮೇಲೆ ಕಿರುಕುಳ ಆಗುತ್ತೀರುವ ಸಲುವಾಗಿ ಕಚೇರಿಯಿಂದ ಕಚೇರಿಗೆ ವರ್ಗಾವಣೆ ಪಡೆದುಕೊಂಡು ಹೋಗುವ ರೀತಿಯಾಗಿದೆ.ನಾನು ಯಾವುದೇ ಕಚೇರಿಗೆ ಹೋದರು ಅಲ್ಲಿಯ ಅಧಿಕಾರಿಗಳಿಗೆ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಾ ಹೊರಟಿರುತ್ತಾರೆ. ಆ ಅಧಿಕಾರಿಯವರು ನನ್ನ ಮೂಲ ಇಲಾಖೆಯವರೇ ಆಗಿರುತ್ತಾರೆ. ಈ ನೌಕರಳು ಸರಿ ಇಲ್ಲಾ, ವರ್ತನೆ ಸರಿ ಇಲ್ಲಾ, ಕಚೇರಿ ಮಾಹಿತಿ ಹೊರಗೆ ಹಾಕುತ್ತಾಳೆ, ಸಿಬ್ಬಂದಿಗಳನ್ನು ನನ್ನ ವಿರುದ್ದ ಎತ್ತಿ ಕಟ್ಟುವುದು,ಮೇಲಾಧಿಕಾರಿಗಳಿಗೆ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಬರುವ ರೀತಿ, ಅನುಮಾನ ಬರುವ ರೀತಿ ಮಾಡುವುದು ನಾನು ಕೆಲಸ ಮಾಡಿದರು, ಕೆಲಸ ಮಾಡುವುದಿಲ್ಲ ಎಂದು ದೂರು ನೀಡುವುದು ಮಾಡುತ್ತಾರೆ. ಸದರಿಯವರೇ ನಮ್ಮ ಶಾಖೆಯ ಮೇಲ್ವೀಚಾರಕರು ಆದ ಕಾರಣ ಎಲ್ಲರು ಅವರನ್ನೆ ನಂಬುತ್ತಾರೆ ಅವರು ನನಗೆ ಕಿರುಕುಳ ಮಾಡುತ್ತೀರುವ ಬಗ್ಗೆ ದಾಖಲೆಗಳನ್ನು ಇರಿಸಿಕೊಮಡಿರುತ್ತೇನೆ. ಈ ವಿಷಯವಾಗಿ ನಾನು ತುಂಬಾ ನೋಂದಿದ್ದೀನಿ ದಯವಿಟ್ಟು ಸಲಹೆ ನೀಡಿ. ನನ್ನ ಕುಟುಂಬದ ಹೊಣೆ ನನ್ನ ಮೇಲೆ ಇದೆ. ದಯವಿಟ್ಟು ನನಗೆ ಸಹಾಯ ಮಾಡಿ.

    ಪ್ರತ್ಯುತ್ತರಅಳಿಸಿ
  43. ನಮಸ್ಕಾರ ಸರ್
    ತಂದೆ-ತಾಯಿ ಇಬ್ಬರು ಸರ್ಕಾರಿ ನೌಕರರಾಗಿದ್ದು, ಅವರಲ್ಲಿ ಯಾರಾದರೂ ಒಬ್ಬರು ಮೊದಲು ನಿಧನರಾದಲ್ಲಿ ಅವರ ವಾರುಸದಾರ ಮಕ್ಕಳು (ಮಗ ಅಥವಾ ಮಗಳು) ಅನುಕಂಪದ ಆಧಾರದ ನೇಮಕಾತಿ ಪಡೆಯಬಹುದೇ ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡಲು ಕೋರಿದೆ

    ಪ್ರತ್ಯುತ್ತರಅಳಿಸಿ
  44. ಕೆಲವಂದು ಶಿಕ್ಷಕರು ಪ್ರೌಢಶಾಲಾ ವಿಭಾಗದ ಭೌತ ವಿಜ್ಞಾನ ಶಿಕ್ಷಕರಾಗಿ ದಿನಾಂಕ01-06-2005ರಲ್ಲಿ ನೇಮಕಾತಿ ಹೊಂದಿ ನಂತರ ಇಲಾಖಾ ಅನುಮತಿ ಪಡೆದು ದಿನಾಂಕ:11-07-2007ರಲ್ಲಿ ನೇರ ನೇಮಕಾತಿಯ ಮೂಲಕ ಪ್ರೌಢಶಾಲಾ ಸಹ ಶಿಕ್ಷಕರಾಗಿ (ಪಿ.ಸಿ.ಎಂ ) ನೇಮಕವಾಗಿರುತ್ತಾರೆ.

    ಸದರಿ ಪ್ರಕರಣದಲ್ಲಿ ಕಾಲಮಿತಿ ಬಡ್ತಿ, ಸ್ವಯಂಚಾಲಿತ ಬಡ್ತಿಯನ್ನು ಯಾವಾ ದಿನಾಂಕದಿಂದ ಮಂಜೂರು ಮಾಡಬೇಕೆಂಬುದರ ಬಗ್ಗೆ ಮಾರ್ಗದರ್ಶನ ನೀಡಬೇಕೆಂದು ತಮ್ಮಲ್ಲಿ ಕೋರಿದೆ.

    ಪ್ರತ್ಯುತ್ತರಅಳಿಸಿ

  45. ಸರ್ ನಾನು ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ 12 ವರ್ಷ ಸೇವೆ ಸಲ್ಲಿಸುತ್ತೇನೆ ನಾನು ಕಾಲಬದ್ಧ ಮುಂಬಡ್ತಿ ವೇತನ ಪಡೆಯಲು ಯಾವ ಯಾವ ಇಲಾಖಾ ಪರೀಕ್ಷೆಗಳನ್ನು ಪಾಸ್ ಆಗಬೇಕು ಈ ಕುರಿತು ಯಾವುದಾದರೂ ಸುತ್ತೋಲೆ ಅಥವಾ ಸರ್ಕಾರಿ ಪುಸ್ತಕಗಳು ಮಾಹಿತಿ ಕುರಿತು ಇರುತ್ತವೆ ಅಂತ ತಿಳಿಸಲು ತಮ್ಮಲ್ಲಿ ಗೌರವಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ ಸರ್ 🙏🙏
    ವಂದನೆಗಳೊಂದಿಗೆ ದೂರವಾಣಿ ಸಂಖ್ಯೆ9008696011

    ಪ್ರತ್ಯುತ್ತರಅಳಿಸಿ
  46. ಸರ್ಕಾರಿ ನೌಕರರ ಪಿಂಚಣಿ ವರ್ಗಾವಣೆಯನ್ನು ಬೇರೆ ರಾಜ್ಯಕ್ಕೆ ಪಡೆಯಲು ಅವಕಾಶ ಇದೆ ಯೇ?

    ಪ್ರತ್ಯುತ್ತರಅಳಿಸಿ
  47. ನಾನು xyz...ಮೊದಲ ವಿಭಾಗದ ಸಹಾಯಕನಾಗಿ ನೇಮಕಗೊಂಡಿದ್ದೇನೆ.ನಾನು ಪ್ರೊಬೇಷನರಿ ಅವಧಿಯಲ್ಲಿದ್ದೇನೆ. ನಾನು ನನ್ನ ಜಿಲ್ಲೆಗೆ ವರ್ಗಾವಣೆ ಪಡೆಯಲು ಬಯಸುತ್ತೇನೆ.. ಪ್ರೊಬೇಷನರಿ ಅವಧಿಯಲ್ಲಿ ಇದು ಸಾಧ್ಯವೇ? ನನ್ನ ಸಂಗಾತಿಯೂ ಸರ್ಕಾರಿ ನೌಕರ ಆಗಿದ್ದಾರೆ...

    ಪ್ರತ್ಯುತ್ತರಅಳಿಸಿ
  48. ಹಬ್ಬದ ಮುಂಗಡ ಪಡೆಯುವ ಸಲುವಾಗಿ list of Festival in karnataka ತಿಳಿಸಿ ಸರ್

    ಪ್ರತ್ಯುತ್ತರಅಳಿಸಿ
  49. ನನ್ನ ಪತ್ನಿ ಹೆರಿಗೆ ರಜೆಯ ನಂತರ ಮೂರು ತಿಂಗಳು ವೈದ್ಯಕೀಯ ಪ್ರಮಾಣ ಪತ್ರ ನೀಡಿ ಮೂರು ತಿಂಗಳು ವೇತನ ರಹಿತ ರಜೆ ಪಡೆದಿದ್ದು ಇದರಿಂದ ವಾರ್ಷಿಕ ಭಡ್ತಿ ದಿನಾಂಕ ಮುಂದಕ್ಕೆ ಹೋಗುತ್ತದೆಯೇ? ಇದು ಟೈಂ ಬಾಂಡ್ ಮೇಲೆ ಪರಿಣಾಮ ಬೀರುತ್ತದೆಯೇ?

    ಪ್ರತ್ಯುತ್ತರಅಳಿಸಿ